ಮಡಿಕೇರಿ, ಅ. ೧೮: ಸಂಗೀತ ಗಾನ ಲಹರಿ ಕರ್ನಾಟಕ ಯೂತ್ ವೆಲ್ಪೆರ್ ಅಸೋಸಿ ಯೇಷನ್ ಹಾಗೂ ರಿಯಾಲಿಟಿ ಬುಕ್ ಆಫ್ ವರ್ಡ್ ರೆಕಾರ್ಡ್ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಮಿಸಸ್ ಇಂಡಿಯಾ ಕರ್ವಿ ವಿಜೇತೆ, ಸಮಾಜ ಸೇವಕಿ ಕೊಣಿಯಂಡ ಕಾವ್ಯ ಸಂಜು ರವರಿಗೆ ಶಿವಮೊಗ್ಗದ ಸಂಗೀತ ಗಾನ ಲಹರಿ ಸಂಸ್ಥೆಯಿAದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿ ಡಾ. ಪುನೀತ್ ರಾಜಕುಮಾರ್ ಕಲಾರತ್ನ ಸೇವಾ ಪ್ರಶಸ್ತಿ -೨೦೨೪ ನೀಡಲಾಯಿತು.

ಇವರು ಕೊಡಗಿನಲ್ಲಿ ಬಾರಿ ಮಳೆಯಿಂದ ಮನೆಗಳಿಗೆ ಹಾನಿಯುಂಟಾದ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ ಸಹಾಯ ಹಸ್ತ ನೀಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಸ್ವಯಂ ಪ್ರೇರಣಾ ಬಳಗದ ವತಿಯಿಂದ ಜನರಿಗೆ ಉಪಯೋಗವಾಗುವಂತೆ ದಿನಸಿ ಕಿಟ್ ಹಾಗೂ ರಕ್ತದಾನ ಶಿಬಿರ, ಸಸಿಗಳನ್ನು ನೆಡುವ ಹಾಗೂ ನೇತ್ರದಾನ, ದೇಹ ದಾನಗಳಂತಹ ಮಹತ್ವದ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಇವರು ಜೆ.ಸಿ.ಐ. ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಪೊಮ್ಮಕ್ಕಡ ಕೂಟ ಕೊಡವ ಸಮಾಜ, ಪೊನ್ನಂಪೇಟೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ಮಾಡಿವೆ.