ಕೂಡಿಗೆ, ಅ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮತ್ತು ಮದಲಾಪುರ ವ್ಯಾಪ್ತಿಯಲ್ಲಿ ಸೋಮವಾರ ಪೇಟೆ-ಕುಶಾಲನಗರ ಮುಖ್ಯ ರಸ್ತೆಯ ಮೇಲೆ ಹಾರಂಗಿ ನಾಲೆಯ ನೀರು ಹರಿಯು ತ್ತಿರುವ ಹಿನ್ನೆಲೆ ಸಾರ್ವಜನಿ ಕರಿಗೆ ಹಾಗೂ ರಸ್ತೆಯ ಬದಿಯ ಮನೆಗಳ ಗ್ರಾಮಸ್ಥರಿಗೆ ತೊಂದರೆಗಳು ಎದುರಾಗಿದೆ. ಸಂಬAಧಿಸಿದ ಇಲಾಖೆಯವರು ಕಾಲುವೆಗಳ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕೆAದು ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮಳೆಯ ನೀರು ಮತ್ತು ಹಾರಂಗಿ ಮುಖ್ಯ ನಾಲೆಗೆ ಹೊಂದಿಕೊAಡಿರುವ ಉಪ ಕಾಲುವೆಗಳ ಸಮರ್ಪಕವಾದ ದುರಸ್ತಿ ಆಗದ ಹಿನ್ನೆಲೆಯಲ್ಲಿ ನಾಲೆಯ ನೀರು ಲೋಕೋಪಯೋಗಿ ಇಲಾಖೆಯ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ರಸ್ತೆಯು ಹಾಳಾಗುತ್ತಿದೆ.