ಸಿದ್ದಾಪುರ, ಅ. ೧೮: ಸಿದ್ದಾಪುರ-ನೆಲ್ಲಿಹುದಿಕೇರಿ ಮುಖ್ಯ ರಸ್ತೆ ಹದಗೆಟ್ಟ ಪರಿಣಾಮ ವಾಹನ ಸವಾರರ ಹಾಗೂ ಪ್ರಯಾಣಿಕರ ಪಾಡು ಹೇಳತೀರದಂತಾಗಿದೆ.
ಸಿದ್ದಾಪುರದಿAದ ನೆಲ್ಲಿಹುದಿ ಕೇರಿಗೆ ತೆರಳುವ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಗುಂಡಿ ಮಯವಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಾಹನ ಸವಾರರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯ ರಸ್ತೆಯು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಯೋಗ್ಯವಲ್ಲ ದಂತಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯಿತಿಯ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಿದ್ದಾಪುರ-ನೆಲ್ಲಿಹುದಿಕೇರಿ ಮುಖ್ಯ ರಸ್ತೆಯು ರಾಜ್ಯ ಹೆದ್ದಾರಿ ೮೮ಬಿ, ೮೯, ೯೧ ಆಗಿರುವ ಹಿನ್ನೆಲೆಯಲ್ಲಿ ರಸ್ತೆಯ ದುರಸ್ತಿ ಲೋಕೋಪಯೋಗಿ ಇಲಾಖೆಗೆ ಸೇರಿದಾಗಿದೆ.
ನೆಲ್ಲಿಹುದಿಕೇರಿ, ವಾಲ್ನೂರು, ಮರಗೋಡು, ಚೆಟ್ಟಳ್ಳಿ, ಅರೆಕಾಡು ಸೇರಿದಂತೆ ಹಲವಾರು ಗ್ರಾಮಗಳಿಂದ ಸಿದ್ದಾಪುರದ ವಿವಿಧ ಶಾಲೆಗಳಿಗೆ ಆಟೋ ರಿಕ್ಷಾ ಸೇರಿದಂತೆ ಖಾಸಗಿ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿ ಗಳನ್ನು ಇದೇ ಮಾರ್ಗದಲ್ಲಿ ಕರೆದೊಯ್ಯಲಾಗುತ್ತಿದೆ. ಸಿದ್ದಾಪುರ-ನೆಲ್ಲಿಹುದಿಕೇರಿ ಮುಖ್ಯರಸ್ತೆಯಲ್ಲಿನ ಗಜಗಾತ್ರದ ಗುಂಡಿಗಳಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಚಾಲಕನ ದೃಷ್ಟಿ ಅಲ್ಪ ಬದಲಾದರೂ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನೆಲ್ಲಿಹುದಿಕೇರಿ ಹಾಗೂ ಸಿದ್ದಾಪುರ ವ್ಯಾಪ್ತಿಯ ನದಿ ತೀರದಲ್ಲಿ ಪ್ರವಾಹ ಎದುರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಅಧಿಕಾರಿಗಳು ಹಾಗೂ ಸಚಿವರುಗಳು ಆಗಮಿಸಿದ್ದರು. ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಇದೇ ಹದಗೆಟ್ಟ ಮುಖ್ಯ ರಸ್ತೆಯ ಮೂಲಕ ತೆರಳಿದ್ದರು. ವಿಪರ್ಯಾಸ ವೆಂದರೆ ಹದಗೆಟ್ಟ ರಸ್ತೆಯ ಪ್ರಯಾಣದ ಸಂಕಟ ಅರಿವಿದ್ದರೂ ಕೂಡ ಯಾರೂ ಕೂಡ ಈ ಕುರಿತು ಪ್ರತಿಕ್ರಿಯೆ ನೀಡದೇ ಮೌನವಾಗಿರು ವುದು ಶೋಚನೀಯ. ಶಾಲಾ ವಿದ್ಯಾರ್ಥಿಗಳನ್ನು ಕೊಂಡೊಯ್ಯು ವಾಗ ವಾಹನದ ಚಕ್ರ ಕಾಣದಂತೆ ಇರುವ ಗುಂಡಿಗಳಿಗೆ ಬಿದ್ದು ವಾಹನ ಅಪಘಾತಗಳು ಸಂಭವಿಸುತ್ತದೆ. ಸಂಬAಧಪಟ್ಟವರು ಎಚ್ಚೆತ್ತುಕೊಂಡರೆ ಅನಾಹುತಗಳು ತಪ್ಪಲಿವೆ ಎಂಬುದು ಆಟೋ ಚಾಲಕರ ಅಭಿಪ್ರಾಯವಾಗಿದೆ.