ಭಾಗಮಂಡಲ, ಅ. ೪: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ತಾ. ೪ಂದು ಬೆಳಿಗ್ಗೆ ೧೦.೨೧ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ ನೆರವೇರಿಸಲಾಯಿತು.
ಕಾವೇರಿ ತೀಥೋದ್ಭವಕ್ಕೆ ಸಂಬAಧಿಸಿದAತೆ ತುಲಾ ಸಂಕ್ರಮಣದ ಪ್ರಯುಕ್ತ ಕಟ್ಟು ವಿಧಿಸುವ ಕಾರ್ಯ ಜರುಗಿತು. ಗ್ರಾಮದ ದೇವಾಲಯಗಳು ತಕ್ಕಮುಖ್ಯಸ್ಥರು, ಅರ್ಚಕರು ಸೇರಿ ಸ್ಥಳೀಯರಾದ ರವಿ ಹೆಬ್ಬಾರ್ ಅವರ ಮನೆಗೆ ತೆರಳಿ ಬಾಳೆಗೊನೆ ಕಡಿದು ನಾದ ಸ್ವರದೊಂದಿಗೆ ಮೆರವಣಿಗೆ ಮೂಲಕ ಭಗಂಡೇಶ್ವರ ದೇವಾಲಯದ ಸನ್ನಿಧಿಗೆ ಆಗಮಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ (ಕಟ್ಟುಬೀಳುವುದು) ವಿಧಿಸಲಾಯಿತು. ಇಂದಿನಿAದ ಜಾತ್ರೆ ಮುಗಿಯುವವರೆಗೆ ನಾಡಿನಲ್ಲಿ ಮದುಮಾಂಸ ಸೇವನೆ, ಮರ ಕಡಿಯುವುದು, ಬಲಿ, ಹಿಂಸಾಕೃತ್ಯಗಳನ್ನು ನಡೆಸುವುದು ಮುಂತಾದ ಕಾರ್ಯಗಳಿಗೆ ನಿರ್ಬಂಧ ಹೇರಲಾಗಿದೆ.
ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಅಕ್ಟೋಬರ್ ೧೪ರಂದು ೧೧:೩೫ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸಲಾಗುವುದು.
(ಮೊದಲ ಪುಟದಿಂದ) ಅದೇ ದಿನ ಕಾಣಿಕೆ ಡಬ್ಬಿ ಇಡುವ ಕಾರ್ಯಕ್ರಮ ನೆರವೇರಲಿದೆ.
ಅರ್ಚಕ ಹರೀಶ್ ಭಟ್ ಮಾತನಾಡಿ, ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಗಂಡೇಶ್ವರ ದೇವಾಲಯದಲ್ಲಿ ಆಜ್ಞಾ ಮಹೂರ್ತ ನೆರವೇರಿಸಲಾಗಿದೆ. ಇದು ದೇಶ ಕಟ್ಟಾಗಿದ್ದು ಎಲ್ಲರೂ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಈ ಮುಹೂರ್ತ ಭಾಗಮಂಡಲ ನಾಡಿಗೆ ಮಾತ್ರ ಸೀಮಿತವಾದುದಲ್ಲ. ಒಂದು ತಿಂಗಳ ಕಾಲ ತಲಕಾವೇರಿ ಜಾತ್ರೆ ನಡೆಯಲಿದ್ದು ಜಾತ್ರೆಯ ಅವಧಿಯಲ್ಲಿ ಕೊಡಗಿನಲ್ಲಿ ಪ್ರತಿಯೊಬ್ಬರೂ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂದರು.
ಈ ಸಂದರ್ಭ ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಆಡಳಿತ ಅಧಿಕಾರಿ ಚಂದ್ರಶೇಖರ್, ರವಿ ಹೆಬ್ಬಾರ್, ದಂಡಿನ ಜಯಂತ್, ಸೂರ್ತಲೆ ಜಯಂತ್, ಕುದುಕುಳಿ ಭರತ್ ಇದ್ದರು. - ಸುನಿಲ್ ಕುಯ್ಯಮುಡಿ