ಕಣಿವೆ, ಅ. ೪: ಮೂವರೂ ಕೂಡ ವೆಲ್ಡಿಂಗ್ ಕೆಲಸ ಕಾರ್ಮಿಕರು. ಜೊತೆ ಜೊತೆಯಾಗಿಯೇ ವೆಲ್ಡಿಂಗ್ ಕೆಲಸಗಳನ್ನು ಮಾಡುತ್ತಿದ್ದವರು. ಇವರ ನಡುವೆ ಏರ್ಪಟ್ಟ ಕೇವಲ ಎರಡು ಸಾವಿರ ರೂ.ಗಳ ಹಣಕಾಸು ವಿಚಾರ ಕೊಲೆಯಲ್ಲಿ ಅಂತ್ಯ ಕಂಡಿದೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯ ನಿವಾಸಿಗಳಾದ ಜೋಸೆಫ್ ಹಾಗೂ ವಸಂತ್ ದಯನೀಯವಾಗಿ ಹತ್ಯೆಗೊಳಗಾದವರು. ಜೋಸೆಫ್ ಕಳೆದ ರಾತ್ರಿಯೇ ಮೃತಪಟ್ಟಿದ್ದು, ಹಲ್ಲೆಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ವಸಂತ್ ಕೂಡ ಶುಕ್ರವಾರ ಸಾವಿಗೀಡಾಗಿದ್ದಾರೆ.

ಆರೋಪಿ ಅದೇ ಗ್ರಾಮದ ಗಿರೀಶ್ ಜೋಸೆಫ್ ಹಾಗೂ ವಸಂತ್ ಎಂಬವರ ಮೇಲೆ ಕೊಡಲಿಯಿಂದ ಮನಬಂದAತೆ ಥಳಿಸಿದ ಪರಿಣಾಮ ಜೋಸೆಫ್ ಕುತ್ತಿಗೆಯ ಭಾಗಕ್ಕೆ ಬಲವಾದ ಏಟು ತಗುಲಿ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಹತನಾದರೆ, ವಸಂತ್ ತಲೆಗೆ ನಾಟಿದ ಕೊಡಲಿಯನ್ನು ತೆಗೆದ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ಜೋಸೆಫ್ ಪತ್ನಿಯಿಂದ ದೂರವಿದ್ದು ಏಕಾಂಗಿಯಾಗಿ ವಾಸವಿದ್ದರು ಎನ್ನಲಾಗಿದೆ. ಹಾಗೆಯೇ ವಸಂತ್ ವಿವಾಹಿತನಾಗಿದ್ದು ೧೩ ವರ್ಷದ ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಪತ್ನಿಯ ಮಾತು ಕೇಳಿದ್ದರೆ ವಸಂತ ಉಳಿಯುತ್ತಿದ್ದ

ಹತ್ಯೆಗೀಡಾದ ವಸಂತ ಅವರ ಪತ್ನಿ ಮೈಸೂರಿನ ಖಾಸಗಿ ಸಂಸ್ಥೆಯೊAದರಲ್ಲಿ ಕೆಲಸ ಮಾಡಿಕೊಂಡು ಮಗನನ್ನು ಓದಿಸುತ್ತಿದ್ದಾರೆ. ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ವಾಸವಿದ್ದು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವಸಂತ ಕಾರು ಚಾಲಕನೂ ಆಗಿದ್ದು, ‘ಮೈಸೂರಿನಲ್ಲಿ ಒಂದು ಕಡೆ ಮಾತನಾಡಿದ್ದೇನೆ. ತಿಂಗಳಿಗೆ ೨೦ ಸಾವಿರ ಸಂಬಳ ಕೊಡುತ್ತಾರೆ. ಇಲ್ಲಿಗೆ ಬಾ. ಒಟ್ಟಿಗೆ ಇದ್ದು ಮಗನನ್ನು ಓದಿಸೋಣ’ ಎಂದು ಪತ್ನಿ ಕರೆದಿದ್ದರಂತೆ.

ವಸAತ ಪತ್ನಿಯ ಮಾತಿಗೆ ಮನ್ನಣೆ ಕೊಟ್ಟು ಹೋಗಿದ್ದರೆ ಬದುಕಿ ಉಳಿಯುತ್ತಿದ್ದ ಎಂದು ವಸಂತ ಅವರ ಸಂಬAಧಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ ‘ಶಕ್ತಿ’ ಗೆ ಮಾಹಿತಿ ನೀಡಿದರು. ಮೃತ ಜೋಸೆಫ್ ಹಾಗೂ ವಸಂತ್ ಇಬ್ಬರೂ ಸಂಬAಧಿಕರು ಹತರಾಗಿರುವುದು ದುರದೃಷ್ಟಕರ ಸಂಗತಿ. ಈ ಪ್ರಕರಣದಲ್ಲಿ ಹಂತಕ ಗಿರೀಶನ ಜೊತೆ ಇತರರೂ ಭಾಗಿಯಾಗಿ ವ್ಯವಸ್ಥಿತ ಸಂಚು ರೂಪಿಸಿರುವ ಗುಮಾನಿ ಇದ್ದು ಪೊಲೀಸರು ಕೂಲಂಕಶವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಬೇಕೆಂದು ಫಿಲೋಮಿನಾ ಆಗ್ರಹಿಸಿದ್ದಾರೆ.

ಒಟ್ಟಾರೆ ಹತರಾದ ಈ ಇಬ್ಬರು ನತದೃಷ್ಟರು ಹಾಗೂ ಹಂತಕ ಗಿರೀಶ್ ಈ ಮೂವರು ಏಕಾಂಗಿಯಾಗಿ ಜೀವಿಸುತ್ತಿದ್ದುದೇ ಇಂತಹ ಕುಕೃತ್ಯಕ್ಕೆ ಆಸ್ಪದವಾಗಿದೆ. ಇಲ್ಲಿ ಓರ್ವ ಪತ್ನಿಯಿಂದ ದೂರವಿದ್ದುದು, ಮತ್ತೋರ್ವ ಪತ್ನಿ ಇದ್ದು ಅವರ ಮಾತು ಕೇಳದಿದ್ದುದು ಇಂತಹ ದುರಂತ ಅಂತ್ಯವನ್ನು ಆಹ್ವಾನಿಸಿದಂತಾಗಿದೆ. ಒಟ್ಟಾರೆ ಪೊಲೀಸರು ಹಂತಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಏನೇ ವೈಮನಸ್ಯಗಳಿದ್ದರೂ ಕ್ಷುಲ್ಲಕ ಕಾರಣಕ್ಕೆ ಹರಿತವಾದ ಕೊಡಲಿಯನ್ನು ಬಗುಲಲ್ಲೇ ಇಟ್ಟುಕೊಂಡು ಸಂಚು ರೂಪಿಸಿ ಧಾರುಣವಾಗಿ ಸೌದೆ ಕಡಿದಂತೆ ಕಡಿದು ಹತ್ಯೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಹಂತಕ ಗಿರೀಶ್ ಅವಿವಾಹಿತ ಎನ್ನಲಾಗಿದ್ದು ಪೊಲೀಸರಿಗೆ ಶರಣಾಗಿದ್ದಾನೆ. ಕುಶಾಲನಗರ ಗ್ರಾಮಾಂತರ ಪೋಲೀಸರು ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. -ವರದಿ : ಕೆ.ಎಸ್.ಮೂರ್ತಿ