ಸುAಟಿಕೊಪ್ಪ, ಅ. ೪: ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಕೂಡ ಪ್ರೋತ್ಸಾಹ ನೀಡಬೇಕು ಅವರಿಗೆ ಅವರ ಅಸಕ್ತಿಯಲ್ಲಿ ಕ್ರೀಡೆ ತರಬೇತಿ ಕೊಡಿಸಿ ಅತ್ಯುತ್ತಮ ಪೌಷ್ಟಿಕ ಆಹಾರ ನೀಡುವ ಮೂಲಕ ಉತ್ತಮ ಕ್ರೀಡಾಪಟು ಗಳನ್ನಾಗಿ ರೂಪಿಸ ಬೇಕೆಂದು ಏಕಲವ್ಯ ಪ್ರಶಸ್ತಿ ಪುರಸ್ಕಾತರಾದ ವೈಟ್‌ಲಿಪ್ಟಿಂಗ್ ಮತ್ತು ಆಥ್ಲಟಿಕ್ಸ್ನಲ್ಲಿ ಮಾಜಿ ರಾಷ್ಟಿçÃಯ ಚಾಂಪಿಯನ್ ಭಾನುಮತಿ ಮೆಂಡನ್ ಕರೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆಯೊಂದಿಗೆ ಸ್ವಚ್ಛತಾ ಈ ಸೇವಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸಾಧನೆ ಮಾಡಲು ಪೋಷಕರ ಮತ್ತು ಶಿಕ್ಷಕರ ಹಾಗೂ ಒಡನಾಡಿ ಸಹಕಾರ ತುಂಬಾ ಅಗತ್ಯ. ತಾವು ವಿವಾಹವಾದ ಮೇಲೂ ಕ್ರೀಡೆಯಲ್ಲಿ ಸಾಧನೆ ಮಾಡಲು ತಮ್ಮ ಪತಿ ಪ್ರೋಫೆಸರ್ ಎಂ.ಪಿ. ಪ್ರೇಮ್ ಸುಬ್ಬಯ್ಯ ಅವರ ಸಹಕಾರ ಅಮೋಘವಾದುದು ಎಂದು ಸ್ಮರಿಸಿದ ಅವರು ಸುಪುಷ್ಠ ದೇಹದಲ್ಲಿ ಸುಪುಷ್ಠ ಮನಸ್ಸು ಎಂಬುದನ್ನು ಪ್ರತಿಯೊಬ್ಬರು ಆರಿತು ಬಾಳಬೇಕೆಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕಾವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಟಿ.ರವೀಶ್ ಅವರು ಗಾಂಧಿ ಜಯಂತಿಯ ದಿನದಂದು ಸರಕಾರದ ಆದೇಶದ ಅನುಸಾರ ವಿಶೇಷ ಗ್ರಾಮಸಭೆಯನ್ನು ನಡೆಸಿ ವಿಶೇಷ ಕ್ರೀಯಾ ಯೋಜನೆಗಳನ್ನು ಘೋಷಣೆ ಮಾಡಿ ಗ್ರಾಮಸ್ಥರ ಮತ್ತು ಸಾರ್ವಜನಿಕರ ತಿಳುವಳಿಕೆಗೆ ತರಲಾ ಗುತ್ತದೆ. ಸ್ವಚ್ಛತಾ ಈ ಸೇವಾ ಸಪ್ತಾಹದ ಸಮಾರೋಪ ಸಮಾ ರಂಭದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಕೊಡಗರಹಳ್ಳಿ ಅಂದಗೋವೆ ಮತ್ತು ಕಲ್ಲೂರು ಗ್ರಾಮಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ನಿಯಮನುಸಾರ ನಡೆಸಲಾಗುತ್ತಿದ್ದು, ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳನ್ನು ಓಡಿಎಫ್ ಮಾದರಿ ಗ್ರಾಮವೆಂದು ಘೋಷಿಸಲಾಗುತ್ತಿದೆ ಅವರು ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ಳಿಯಪ್ಪ ಅವರು ಮಾತನಾಡಿ, ಸ್ವಾತಂತ್ರö್ಯ ಸಂಗ್ರಾಮದಲ್ಲಿ ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸಿ ಸನ್ಮಾನಕ್ಕೆ ಭಾಜನರಾದ ಭಾನುಮತಿ ಮೆಂಡನ್ ಅವರ ಸಾಧನೆ ಅವರ ಪತಿ ಪ್ರೋಫೆಸರ್ ಎಂ.ಪಿ.ಪ್ರೇಮ್‌ಸುಬ್ಬಯ್ಯ ಕ್ರೀಡಾ ಪ್ರೇಮ ಮತ್ತು ಸ್ಫೂರ್ತಿಯನ್ನು ಶ್ಲಾಘಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಅಣ್ಣಪ್ಪ ಸನ್ಮಾನಿತರನ್ನು ಪರಿಚಯಿಸಿದರು. ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿಯವರು ಪ್ರಾರ್ಥಿಸಿ, ಪಿಡಿಓ ರವೀಶ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಅವರು ಮಹಾತ್ಮ ಗಾಂಧೀಜಿ ಕುರಿತು ತಾವೇ ರಚಿಸಿದ ಗೀತೆಯೊಂದು ಹಾಡುವ ಮೂಲಕ ನೆರೆದಿದ್ದವರ ಗಮನಸೆಳೆದರು.