ಸುAಟಿಕೊಪ್ಪ, ಅ. ೪: ಕ್ಷÄಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗುಂಡು ಹಾರಿಸಿದ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ಬಳಿ ನಡೆದಿದೆ.

ಯಂಕನ ಶ್ರೀರಾಮ್ ಎಂಬಾತ ಸುಬ್ರಮಣಿ ಎಂಬವರ ಮೇಲೆ ಗುಂಡು ಹಾರಿಸಿದ್ದು, ಪೊಲೀಸರು ಶ್ರೀರಾಮ್‌ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಆರೋಪಿ ಶ್ರೀರಾಮ್ ಹಾಗೂ ಸುಬ್ರಮಣಿ ಒಂದೇ ಗ್ರಾಮದಲ್ಲಿ ನೆಲೆಸಿದ್ದು, ಶುಕ್ರವಾರ ಸಂಜೆ ೬ ಗಂಟೆಯ ಸಂದರ್ಭದಲ್ಲಿ ಇಬ್ಬರ ನಡುವೆ ಕ್ಷÄಲ್ಲಕ ಕಾರಣಕ್ಕೆ ವಾಗ್ವಾದ ಏರ್ಪಟ್ಟಿದೆ. ಈ ವೇಳೆ ಯಂಕನ ಶ್ರೀರಾಮ್ ತನ್ನ ಮನೆಯಲ್ಲಿ ಇರಿಸಿದ್ದ ಏರ್‌ಗನ್ ತಂದು ಏಕಾಏಕಿ ಸುಬ್ರಮಣಿ ಮೇಲೆ ಗುಂಡು ಹಾರಿಸಿದ್ದು, ಸುಬ್ರಮಣಿಯ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗುಲಿದೆ. ಕೂಡಲೇ ಸ್ಥಳೀಯರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಗಾಯಾಳುವನ್ನು ಸಾಗಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.

ಸುಂಟಿಕೊಪ್ಪ ಪೊಲೀಸರು ಪ್ರಕರಣದ ಆರೋಪಿ ಶ್ರೀರಾಮ್‌ನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.