ವೀರಾಜಪೇಟೆ, ಅ. ೪: ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ೧೭ನೇ ವರ್ಷದ ಅದ್ದೂರಿಯ ಆಯುಧ ಪೂಜಾ ಸಮಾರಂಭ ಕಾರ್ಯಕ್ರಮದ ಆಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮಮಿಕೊಳ್ಳಲಾಗಿದೆ ಎಂದು ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ವತಿಯಿಂದ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧÀ್ಯಕ್ಷ ಕುಂಬೇಯAಡ ಸುರೇಶ್ ತಾ.೧೧ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸಂಘದ ಕಚೆೆÃರಿಯಲ್ಲಿ ಆಯುಧ ಪೂಜೆ ನಡೆಯಲಿದೆ. ನಂತರ ಸ್ಥಳೀಯ ಕಲಾ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ತೋರ ಗ್ರಾಮದ ಗೋಪಮ್ಮ ತಂಡದಿAದ ಕೊಡಗಿನ ಜನಪದ ಕಲೆಯಾದ ಉರೂಟ್ಟಿ ಕೊಟ್ಟ್ ಪಾಟ್, ಪ್ರಥಮ ಬಾರಿಗೆ ಕಾಲೇಜು ವಿದ್ಯಾರ್ಥಿಗಳಿಂದ ಚಂಡೆಮೇಳ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ ೭.೩೦ಕ್ಕೆ ಭವ್ಯ ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬಸ್ ಕಾರ್ಮಿಕರ ಮಕ್ಕಳಿಗೆ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಜ್ ಮಾತನಾಡಿ, ಆಯುಧ ಪೂಜಾ ಆಂಗವಾಗಿ ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ, ಕೊಡಗು ಮತ್ತು ಮೈಸೂರು ವಿಭಾಗದ ನುರಿತ ಬೈಕ್ ಸವಾರರಿಂದ ಮಧ್ಯಾಹ್ನ ೩ ಗಂಟೆಗೆ ಬೈಕ್ ಶೋ ಕಾರ್ಯಕ್ರಮ ಹಾಗೂ ಸಂಜೆ ಶಾರದೆ ಮ್ಯೂಸಿಕಲ್ ನೈಟ್ಸ್ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಕಲಾ ಪ್ರತಿಭೆಗಳು ೯೮೪೪೫೫೮೫೩೫, ೮೭೬೨೨೭೯೩೯೭, ಮತ್ತು ೯೪೮೧೮೮೨೭೦೮ ಸಂಪರ್ಕಿಸಬಹುದಾಗಿದೆ. ನೋಂದಾಯಿಸಿಕೊಳ್ಳಲು ತಾ. ೮ ಕೊನೆ ದಿನವಾಗಿದೆ ಎಂದು ಮಾಹಿತಿ ನೀಡಿದರು.