ಸೋಮವಾರಪೇಟೆ, ಅ.೪: ವಿವಾಹಿತೆ ಮಹಿಳೆಯ ಕೈ ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಮತ್ತು ಆ ಮಹಿಳೆಯ ಪತಿಯಿಂದ ಹಲ್ಲೆ, ಕೊಲೆಯತ್ನ ನಡೆದ ದೂರುಗಳಿಗೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆ ಹಾಗೂ ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಘಟನೆಗೆ ಸಂಬAಧಿಸಿದAತೆ ವಿವಾಹಿತ ಮಹಿಳೆಯ ಪತಿಯನ್ನು ಕೊಲೆಯತ್ನ ಪ್ರಕರಣದಡಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಘಟನೆಯ ವಿವರ : ಮಾದಾಪುರದ ನಿವಾಸಿಯೊಬ್ಬರ ಪತ್ನಿ ಅಲ್ಲಿನ ಮೆಡಿಕಲ್ ಶಾಪ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಅಂಗಡಿಯ ಸಮೀಪದಲ್ಲಿ ಗ್ರಾಮ ಒನ್ ಕೇಂದ್ರ ಇಟ್ಟುಕೊಂಡಿರುವ ವ್ಯಕ್ತಿಯೋರ್ವ ಮಹಿಳೆಯ ಮೊಬೈಲ್ ನಂಬರ್ ಕೇಳುತ್ತಿದ್ದ ಎನ್ನಲಾಗಿದೆ. ಇದಕ್ಕೆ ಸ್ಪಂದಿಸದೇ ಇದ್ದು, ಸೆ. ೩೦ ರಂದು ಸಂಜೆ ಕರೆದು ನಿನ್ನ ಮೊಬೈಲ್ ನಂಬರ್ ಕೊಡು ಎಂದು ಕೇಳಿದ್ದಾನೆ. ಆಗಲೂ ನಂಬರ್ ಕೊಡದೇ ಇದ್ದ ಹಿನ್ನೆಲೆ ಒಂದು ಸಣ್ಣ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯೊAದನ್ನು ಬರೆದು ನೀಡಿದ್ದಾನೆ. ಅದನ್ನು ಮನೆಗೆ ತಂದು ತನ್ನ ಪತಿಗೆ ನೀಡಿದ್ದಾರೆ. ತಾ. ೧ ರಂದು ಮಹಿಳೆಯ ಮೊಬೈಲ್‌ಗೆ ವ್ಯಕ್ತಿ ಚೀಟಿಯಲ್ಲಿ ಬರೆದು ನೀಡಿದ್ದ ಸಂಖ್ಯೆಯಿAದ ಕರೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿನ್ನೆ ದಿನ ಮಧ್ಯಾಹ್ನ ಶೌಚಾಲಯಕ್ಕೆ ತೆರಳಿ ಹಿಂತಿರುಗುವಾವ ಆಗಮಿಸಿದ ಚೀಟಿ ನೀಡಿದ್ದ ವ್ಯಕ್ತಿ ಮಹಿಳೆಯ ಕೈಯನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ್ದು, ಈ ಸಂದರ್ಭ ಬಿಡಿಸಿಕೊಂಡು ಬಂದು ತನ್ನ ಪತಿಗೆ ವಿಷಯ ತಿಳಿಸಿದ್ದಾರೆ ಎಂದು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾನಭಂಗಕ್ಕೆ ಯತ್ನ ಸೇರಿದಂತೆ ಇನ್ನಿತರ ಕಲಂಗಳಡಿ ಮೊಕದ್ದಮೆ ದಾಖಲಾಗಿದೆ.

ಪ್ರತಿದೂರು-ಪತಿಯ ಬಂಧನ: ಮಹಿಳೆಯ ಪತಿ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ, ಹಲ್ಲೆ, ಕೊಲೆಯತ್ನ ಸೇರಿದಂತೆ ಇತರ ಕಲಂಗಳಡಿ ವ್ಯಕ್ತಿ ದೂರು ದಾಖಲಿಸಿದ್ದು, ಮೊಕದ್ದಮೆ ದಾಖಲಾಗಿದೆ. ಅಂಗಡಿಗೆ ಬಂದ ಮಹಿಳೆಯ ಪತಿ ಹಾಗೂ ಇತರ ಐವರು ಕಂಪ್ಯೂಟರ್ ಮಾನಿಟರ್‌ನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿರುವುದಾಗಿ ವ್ಯಕ್ತಿ ದೂರು ನೀಡಿದ್ದಾರೆ.

ಗಾಯಾಳು ಮಡಿಕೇರಿ ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನ ಮೇರೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಸಂಬAಧ ಮಹಿಳೆಯ ಪತಿಯನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.