ಚೆಯ್ಯಂಡಾಣೆ, ಅ. ೪: ಮಹಾರಾಷ್ಟçದ ಮುಂಬೈನ ಅಂದೇರಿಯಲ್ಲಿ ಕೊಂಬೆಟ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ೩ನೇ ಅಂರ್ರಾಷ್ಟಿçÃಯ ಮಟ್ಟದ ೩೫ ಕೆ.ಜಿ. ತೂಕದ ಪುರುಷರ ಕರಾಟೆಯ ಕುಮಿಟೆ ವಿಭಾಗದ ಪಂದ್ಯಾವಳಿಯಲ್ಲಿ ನಾಪೋಕ್ಲು ಬೇತು ಗ್ರಾಮದ ಕುಟ್ಟಂಜೆಟ್ಟೀರ ಅಂಜನ್ ಭಾಗವಹಿಸಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾನೆ.
ನಾಪೋಕ್ಲು ಬೇತು ಗ್ರಾಮದ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂಜನ್ ಬೇತು ಗ್ರಾಮದ ಕುಟ್ಟಂಜೆಟ್ಟೀರ ಪೂಣಚ್ಚ ಲೀಲಾವತಿ ದಂಪತಿಯ ಪುತ್ರ. ಈತ ಚೆಟ್ಟಿಯಾರಂಡ ದಿಲನ್ ತಿಮ್ಮಯ್ಯ ಮತ್ತು ಧೀರಜ್ ಕಾರ್ಯಪ್ಪ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.