ಮಡಿಕೇರಿ, ಅ. ೪: ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಕಳತ್ಮಾಡು ಲಯನ್ಸ್ ಶಾಲೆಯ ವಿದ್ಯಾರ್ಥಿನಿ ಮಚ್ಚಮಾಡ ವಿದ್ಯಾ ಪೊನ್ನಮ್ಮ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
೮ನೇ ತರಗತಿಯ ಈ ವಿದ್ಯಾರ್ಥಿನಿ ೮೦೦ ಮೀಟರ್ ಓಟ ಹಾಗೂ ೧,೫೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾಳೆ. ಈಕೆ ಪ್ರಸ್ತುತ ಪೊನ್ನಂಪೇಟೆ ಡಿ.ವೈ.ಇ.ಎಸ್.ನಲ್ಲಿ ಹಾಕಿ ತರಬೇತಿಯನ್ನೂ ಪಡೆಯುತ್ತಿದ್ದು, ಕುರ್ಚಿ ಗ್ರಾಮದ ಮಚ್ಚಮಾಡ ಉದಯ್ ಹಾಗೂ ಶ್ವೇತಾ ದಂಪತಿ ಪುತ್ರಿ.