ಕೂಡಿಗೆ, ಅ. ೪: ಶ್ರೀ ದಂಡಿನಮ್ಮ ತಾಯಿ ನವರಾತ್ರಿ ಪೂಜಾ ಸೇವಾ ಸಮಿತಿ ಇವರ ವತಿಯಿಂದ ೮ನೇ ವರ್ಷದ ನವರಾತ್ರಿ ಪೂಜಾ ಕಾರ್ಯಕ್ರಮ ದಂಡಿನಮ್ಮ ತಾಯಿ ದೇವಾಲಯದಲ್ಲಿ ಆರಂಭಗೊAಡಿದೆ. ನವರಾತ್ರಿ ಹಬ್ಬದ ಅಂಗವಾಗಿ ದೇವಿಗೆ ಪ್ರತಿ ದಿನ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಕೈಂಕರ್ಯಗಳು ನಡೆಯಲಿವೆ.

ತಾ ೮ ರಂದು ಬೆಳಿಗ್ಗೆ ಗಣಪತಿ ಹೋಮ, ಅಭಿಷೇಕ, ವಿವಿಧ ಪೂಜಾ ಕೈಂಕರ್ಯಗಳು ಮ.೧ ಗಂಟೆಗೆ ಮಹಾಮಂಗಳಾರತಿ ,ಅನ್ನ ಸಂತರ್ಪಣೆ, ಸಂಜೆ ದೇವಿಗೆ ಬಾಗಿನ ಸಮರ್ಪಿಸಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.