ಮಡಿಕೇರಿ, ಅ. ೪: ಸೆಸ್ಕ್ನ ಕಾರ್ಯಪಾಲಕ ಅಭಿಯಂತರರಾಗಿದ್ದ ಅನಿತಾ ಬಾಯಿ ಅವರು ಜಿಲ್ಲೆಯಿಂದ ಮಂಡ್ಯಕ್ಕೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೊಂಡು ಮಂಡ್ಯ ಜಿಲ್ಲೆಗೆ ತೆರಳುತ್ತಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಆದ ಅನಿತ ಬಾಯಿ ಅವರನ್ನು ಮಡಿಕೇರಿ ತಾಲೂಕು ವಿದ್ಯುತ್ ಗುತ್ತಿಗೆದಾರ ಸಂಘದ ವತಿಯಿಂದ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರವಿ ಅಪ್ಪು ಕುಟ್ಟನ್, ಕೊಡಗು ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಕೆ.ಬಿ. ಪೂಣಚ್ಚ, ಮಾಜಿ ಕಾರ್ಯದರ್ಶಿ ರವಿಚಂದ್ರ, ಮಾಜಿ ಖಜಾಂಚಿ ಮೊಹಮದ್ ಶರೀಫ್ ಹಾಗೂ ಇತರ ಸದಸ್ಯರು ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.