ಸೋಮವಾರಪೇಟೆ, ಅ. ೪: ಸ್ಥಳೀಯ ಶ್ರೀ ಬಸವೇಶ್ವರ ದೇವಾಲಯ ದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆತಿದ್ದು, ಶ್ರೀ ದುರ್ಗಾ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸ ಲಾಯಿತು. ಆನೆಕೆರೆಯಿಂದ ಗಂಗಾ ಪೂಜೆಯ ನಂತರ ಬಸವೇಶ್ವರ ರಸ್ತೆಯಲ್ಲಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ಘಟಸ್ಥಾಪನೆ ಮಾಡಲಾಯಿತು. ನಂತರ ಹೂವಿನ ಅಲಂಕಾರ, ರಾಜೋಪಚಾರ ಪೂಜೆ ಮತ್ತು ಶರನ್ನವರಾತ್ರಿಯ ಅಂಗವಾಗಿ ವಿಶೇಷ ಪೂಜೆಗಳು ನಡೆದವು.