*ಗೋಣಿಕೊಪ್ಪ, ಅ. ೩: ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಗೋಣಿಕೊಪ್ಪ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಕ್ಟೋಬರ್ ೯ ರಂದು ಪತ್ರಕರ್ತರಿಗೆ ಮುಕ್ತ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ.
ಪೊನ್ನಂಪೇಟೆ ತಾಲೂಕಿನ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಕಾರ್ಯನಿರತ ಪತ್ರಕರ್ತರು ಭಾಗವಹಿಸಬಹುದಾಗಿದೆ. ಹಗ್ಗಜಗ್ಗಾಟ, ಚೀಲ ಓಟ, ತೆಂಗಿನ ಕಾಯಿಗೆ ಕಲ್ಲು ಎಸೆಯುವುದು, ಶಾಟ್ ಪುಟ್, ಒಂಟಿ ಕಾಲು ಓಟ ಕ್ರೀಡೆ ನಡೆಯಲಿದೆ. ಅಕ್ಟೋಬರ್ ೫ರ ಒಳಗೆ ೯೪೪೮೯೭೬೭೬೨ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕ್ರೀಡಾಕೂಟ ಸಂಚಾಲಕರಾದ ಎನ್.ಎನ್. ದಿನೇಶ್ ಹಾಗೂ ದಿಲನ್ ಚಂಗಪ್ಪ ತಿಳಿಸಿದ್ದಾರೆ.