ಮಡಿಕೇರಿ, ಅ. ೩: ಎಂ.ಸಿ.ಸಿ ಮಡಿಕೇರಿ ಇವರ ಸಹಯೋಗದೊಂದಿಗೆ ಮಡಿಕೇರಿ ದಸರಾ ಕ್ರೀಡಾ ಸಮಿತಿಯ ವತಿಯಿಂದ ತಾ.೫ ರ ಶನಿವಾರದಂದು ದಸರಾ ಪ್ರಯುಕ್ತ ೫+೨ ಆಟಗಾರರ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟವನ್ನು ನಗರದ ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನದಲ್ಲಿ ನಡೆಸಲಾಗುತ್ತಿದೆ. ಪ್ರಥಮ ವಿಜೇತ ತಂಡಕ್ಕೆ ರೂಪಾಯಿ ೧೫೦೦೦ ನಗದು ಹಾಗೂ ಟ್ರೋಫಿ ಮತ್ತು ದ್ವಿತೀಯ ವಿಜೇತ ತಂಡಕ್ಕೆ ರೂಪಾಯಿ ೧೦೦೦೦ ನಗದು ಹಾಗೂ ಟ್ರೋಫಿಯೊಂದಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು ಎಂದು ದಸರಾ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ಕರ್ಕೇರ ತಿಳಿಸಿದ್ದಾರೆ. ಮೊದಲು ನೋಂದಾವಣೆ ಆದ ಕೆಲವೇ ತಂಡಗಳಿಗೆ ಅವಕಾಶ ದೊರೆಯುವುದು. ಪ್ರತಿ ತಂಡವು ತಂಡದ ಸಮವಸ್ತçದೊಂದಿಗೆ ೫+೨ ಆಟಗಾರರನ್ನು ಹೊಂದಿರಬೇಕು.

ಪಂದ್ಯಾಟ ನಡೆಯುವ ದಿನಾಂಕದAದು ಬೆಳಿಗ್ಗೆ ೯:೩೦ ಗಂಟೆ ಒಳಗೆ ಮೈದಾನದಲ್ಲಿ ನೋಂದಾವಣಿ ಮಾಡಿಕೊಂಡ ತಂಡಗಳಿಗೆ ಮಾತ್ರ ಅವಕಾಶ ಸಮಯ ಪರಿಪಾಲನೆ ಹಾಗೂ ಶಿಸ್ತನ್ನು ಕಾಪಾಡಿಕೊಳ್ಳಬೇಕು ಆಯೋಜಕರ ತೀರ್ಮಾನವೇ ಅಂತಿಮ.

ಹೊರ ಜಿಲ್ಲೆಯ ತಂಡಗಳಿಗೆ ಅವಕಾಶ ಇರುವುದಿಲ್ಲ ಎಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ

ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ ೭೦೧೯೯೦೯೪೯೫, ೯೪೪೮೯೭೬೪೦೬, ೯೫೩೮೧೫೬೬೬೩ ಸಂಖ್ಯೆಯನ್ನು ಸಂಪರ್ಕಿಸಬಹುದು.