ಚೆಯ್ಯಂಡಾಣೆ, ಅ. ೩: ಕೊಡಗು ಜಿಲ್ಲೆಯ ಅಯ್ಯಂಗೇರಿಯ ಆನಿವಾಸಿಗಳಿಗಾಗಿ ಯುಎಇಯಲ್ಲಿ ನೆಲೆಸಿರುವ ಸದಸ್ಯರು ಒಟ್ಟು ಸೇರಿ ನೂತನ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತಂದಿದ್ದಾರೆ.
ಇತ್ತೀಚೆಗೆ ದುಬೈಯ ದೇರಾದ ಗೋಲ್ಡ್ ಸೂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಷಂಶುದ್ದೀನ್ ಝುಹರಿ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಪಾಲಕ್ಕಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಕುಂಞÂ, ಉಪಾಧ್ಯಕ್ಷರಾಗಿ ಮುಹಮ್ಮದ್ ಪಳ್ಳಿ, ಎನ್.ಎಂ. ಅಬ್ದುಲ್ಲಾ, ಕಾರ್ಯದರ್ಶಿಗಳಾಗಿ ಸಫ್ವಾನ್ ಸಹದಿ, ಹಬೀಬ್ ರಹ್ಮಾನ್, ಇರ್ಫಾನ್ ತೋಟಂ, ನಿರ್ದೇಶಕರಾಗಿ ಸಿದ್ದೀಕ್ ಝುಹರಿ,ಹಂಸ ಪುದಿಯಪೊರೆ, ಯೂಸುಫ್ ಝಮ್ ಝಮ್, ಕ್ಯಾಬಿನೆಟ್ ಸದಸ್ಯರಾಗಿ ನೌಫಲ್ ಮಿಸ್ಬಾಹಿ, ಸುಲೈಮಾನ್ ಲತೀಫಿ, ನಾಸರ್, ಹಕೀಂ, ರಫೀಕ್ ದೇರಾ, ಪಿ.ಎ. ಅಜ್ಮಲ್ ಅವರನ್ನು ಆಯ್ಕೆ ಮಾಡಲಾಯಿತು. ಷಂಶುದ್ದೀನ್ ಝುಹರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂಸುಫ್ ಝಮ್ ಝಮ್ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿ.ಎ. ಸಲೀಂ ಸ್ವಾಗತಿಸಿ, ಸಿ.ಎಂ. ಹಬೀಬ್ ವಂದಿಸಿದರು.