ಶನಿವಾರಸಂತೆ, ಅ. ೩: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ಇರುವ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶರನ್ನವರಾತ್ರಿ ಪ್ರಯುಕ್ತ ೯ ದಿನಗಳು ದೇವಿಯ ಆರಾಧನೆ, ಪೂಜೆ ಹಾಗೂ ವಿಜಯ ದಶಮಿಯಂದು ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ.
ಗುರುವಾರ ನವರಾತ್ರಿಯ ಪ್ರಥಮ ದಿನ ನವದುರ್ಗೆಯರ ಪ್ರಥಮ ಸ್ವರೂಪ ಶ್ರೀ ಶೈಲಪುತ್ರಿ ದೇವಿಯ ಆರಾಧನೆಯ ಪೂಜಾ ಕೈಂಕರ್ಯವನ್ನು ಅರ್ಚಕ ಪ್ರಕಾಶ್ಚಂದ್ರ ಸುವರ್ಣ ನೆರವೇರಿಸಿದರು. ದೇವಿ ಹಾಗೂ ಗುಳಿಗ ದೈವಕ್ಕೆ ಹೂವಿನ ಅಲಂಕಾರ ಮಾಡಿ, ಸೀಯಾಳ, ಹಣ್ಣುಕಾಯಿ, ನೈವೇದ್ಯ ಅರ್ಪಿಸಿದರು. ಮಹಾಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು.