ಚೆಯ್ಯಂಡಾಣೆ, ಅ. ೩: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದಿಂದ ಬಲಮುರಿ, ಪಾರಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಮಕ್ಕಿಕಡವು ಎಂಬಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಕಾಡುಮುಳ್ಳುಗಳು ರಸ್ತೆಗೆ ಆವೃತ್ತವಾಗಿತ್ತು. ಗ್ರಾಮದ ಮಹಿಳೆಯೊಬ್ಬರು ರಸ್ತೆಗೆ ಆವೃತವಾಗಿದ್ದ ಕಾಡು ಮುಳ್ಳುಗಳನ್ನು ಕಡಿದು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೇತು ಗ್ರಾಮದ ಬೆಳೆಗಾರ ಮಹಿಳೆ ಕೊಂಡಿರ ಪುಷ್ಪ ಬೋಪಣ್ಣ ಅವರು ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಕರೆತಂದು ರಸ್ತೆಗೆ ಆವರಿಸಿದ್ದ ಕಾಡು ಮುಳ್ಳುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ವ್ಯಾಪ್ತಿಯ ಸ್ಥಳೀಯ ಆಡಳಿತ ವರ್ಗದ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಒಬ್ಬ ಸಾರ್ವಜನಿಕ ಮಹಿಳೆಯೊಬ್ಬರು ಮಾಡಿಸಿದ್ದು ಶ್ಲ್ಲಾಘನೀಯ ಕಾರ್ಯ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.