ದೇಚಮ್ಮ ಕಾಳಪ್ಪ
ವೀರಾಜಪೇಟೆ, ಅ. ೩: ಪೌರ ಕಾರ್ಮಿಕರು, ಸಿಬ್ಬಂದಿಗಳು, ಸದಸ್ಯರುಗಳು ಪುರಸಭೆಯ ಒಂದು ಕುಟುಂಬ ಇದ್ದಂತೆ. ಪೌರ ಕಾರ್ಮಿಕರು ಒಂದು ದಿನ ಸ್ವಚ್ಛತೆಯಲ್ಲಿ ತೊಡಗದಿದ್ದರೆ ಇಡೀ ಪಟ್ಟಣ ಅಶುಚಿತ್ವದಿಂದ ಕೂಡಿರುತ್ತದೆ. ಪೌರಕಾರ್ಮಿಕರು ಸಮಾಜಕ್ಕೆ ಮಾದರಿ ಎಂದು ವೀರಾಜಪೇಟೆ ಪುರಸಭಾ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಹೇಳಿದರು.
ಪುರಸಭಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಪೌರ ಕಾರ್ಮಿಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಸದಸ್ಯ ಸಿ.ಕೆ. ಪೃಥ್ವಿನಾಥ್ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಫಸಿಹಾ ತಬಸಮ್, ಸದಸ್ಯರುಗಳಾದ ಸಿ.ಕೆ ಪೃಥ್ವಿನಾಥ್, ರಾಫಿ, ಪೂರ್ಣಿಮಾ, ಜಲೀಲ್ರಂಜಿ ಪೂಣಚ್ಚ, ರಾಜೇಶ್ ಮತೀನ್, ಜಿ,ಜಿ ಮೋಹನ್, ದಿನೇಶ್, ರಜನಿಕಾಂತ್, ಮುಖ್ಯಾಧಿಕಾರಿ ಚಂದ್ರಕುಮಾರ್, ಪರಿಸರ ಅಭಿಯಂತರ ನೀತಾ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.
ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರ ಕಾರ್ಮಿಕರು ಹಾಗೂ ಪುರಸಭೆ ಸದಸ್ಯರಿಗೆ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಯಲ್ಲಿ ಪೌರ ಕಾರ್ಮಿಕರ ವಿಭಾಗದ ಫುಟ್ಬಾಲ್ನಲ್ಲಿ ಧರ್ಮ ತಂಡ (ಪ್ರ), ಸದಸ್ಯರು ಹಾಗೂ ಸಿಬ್ಬಂದಿಗಳ ಪಂದ್ಯದಲ್ಲಿ ಸಿ.ಕೆ ಪೃಥ್ವಿನಾಥ್ ತಂಡ (ಪ್ರ), ಪಾಸಿಂಗ್ದ ಬಾಲ್ನಲ್ಲಿ ಅನಿತಾ (ಪ್ರ), ತುಳಸಿ (ದ್ವಿ), ಪೌರ ಕಾರ್ಮಿಕರ ಮಹಿಳೆಯರ ಓಟದ ಸ್ಫರ್ಧೆಯಲ್ಲಿ ರಮ್ಯ (ಪ್ರ), ಜಯಶ್ರೀ (ದ್ವಿ), ಹಿರಿಯರ ವಿಭಾಗದಲ್ಲಿ ಗೌರಿ (ಪ್ರ), ನಾಗಮಣಿ (ದ್ವಿ), ಪೌರ ಕಾರ್ಮಿಕರ ಪುರುಷರ ಓಟದ ಸ್ಫರ್ಧೆಯಲ್ಲಿ ಸುಬ್ರಮಣಿ (ಪ್ರ), ನವೀನ್ (ದ್ವಿ), ಓಟದ ಸ್ಫರ್ಧೆಯಲ್ಲಿ ದಿನೇಶ್ (ಪ್ರ), ಸುಭಾಷ್ (ದ್ವಿ), ಸಿ.ಕೆ. ಪೃಥ್ವಿನಾಥ್ (ತೃ), ಸದಸ್ಯರುಗಳು ಮತ್ತು ಪೌರ ಕಾರ್ಮಿಕರ ನಡುವೆ ನಡೆದ ಹಗ್ಗಜಗ್ಗಾಟದಲ್ಲಿ ಪೌರ ಕಾರ್ಮಿಕರ ಮುರುಗ ತಂಡ (ಪ್ರ), ಮಹಿಳೆಯರ ಹಗ್ಗಜಗ್ಗಾಟದಲ್ಲಿ ಸಂಚಿತ ತಂಡ (ಪ್ರ), ಮಹಿಳೆಯರ ಭಾರದ ಗುಂಡು ಎಸೆತದಲ್ಲಿ ರಮ್ (ಪ್ರ), ರಜನಿ (ದ್ವಿ), ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ದಿನೇಶ್ (ಪ್ರ), ಸುಭಾಷ್ (ದ್ವಿ), ಸಿ.ಕೆ. ಪೃಥ್ವಿನಾಥ್ (ತೃ), ಭಾರದ ಗುಂಡು ಎಸೆತದಲ್ಲಿ ಧರ್ಮ (ಪ್ರ), ವಿನೋದ್ (ದ್ವಿ), ಈಶ್ವರ್ (ತೃ), ಡಿಸ್ಕಸ್ ಥ್ರೋನಲ್ಲಿ ದಿನೇಶ್ (ಪ್ರ), ರಜನಿಕಾಂತ್ (ದ್ವಿ), ಸಿ.ಕೆ. ಪೃಥ್ವಿನಾಥ್ (ತೃ), ಡಿಸ್ಕಸ್ ಥ್ರೋ ಪೌರ ಕಾರ್ಮಿಕರ ಪುರುಷರ ವಿಭಾಗದಲ್ಲಿ ಮಹೇಶ್ (ಪ್ರ), ವಿನೋದ್ ಕುಮಾರ್ (ದ್ವಿ), ಧರ್ಮ (ತೃ), ಡಿಸ್ಕಸ್ ಥ್ರೋನಲ್ಲಿ ಪೌರ ಕಾರ್ಮಿಕರ ಮಹಿಳೆಯರ ವಿಭಾಗದಲ್ಲಿ ಮಾದೇವಿ (ಪ್ರ), ರಾಧ (ದ್ವಿ), ಉಮಾ (ತೃ) ಸ್ಥಾನ ಪಡೆದುಕೊಂಡರು.