ಮಡಿಕೇರಿ, ಅ. ೨: ಕೊಡಗು ಜಿಲ್ಲೆಯ ಮೂಲಕ ವಿದೇಶದಿಂದ ದೇಶದ ವಿವಿಧೆಡೆ ಹಾಗೂ ದುಬೈಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರಾಷ್ಟಿçÃಯ ಜಾಲವೊಂದನ್ನು ಭೇದಿಸಿರುವ ಕೊಡಗಿ ಜಿಲ್ಲಾ ಪೊಲೀಸರು; ಕೋಟ್ಯಂತರ ಬೆಲೆ ಬಾಳುವ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡು ಈ ಸಂಬAಧ ಅಂತರಾಷ್ಟಿçÃಯ ಗಾಂಜಾ ಮಾರಾಟ ಜಾಲದ ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯ ಮೂಲದ ಮಹಮ್ಮದ್ ಅನೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿದ್ದು, ಕೇರಳದ ಕಾಸರಗೋಡಿನ ಮೆಹರೂಫ್ (೩೭) ಹಾಗೂ ವೀರಾಜಪೇಟೆ ಅರ್ಜಿ ಗ್ರಾಮದ ರವೂಫ್ (೨೮) ನೊಂದಿಗೆ ತಂಡವನ್ನು ಕಟ್ಟಿಕೊಂಡು ಅಲ್ಲಿಂದ ಹೈಡ್ರೋಪೋನಿಕ್ ರೀತಿಯಲ್ಲಿ ಬೆಳೆದಿರುವ ಗಾಂಜಾ (ಹೈಡ್ರೋ ಗಾಂಜಾವನ್ನು) ವಿಮಾನದ ಮೂಲಕ ದೇಶದ ವಿವಿಧೆಡೆ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಅಂತರಾಷ್ಟಿçÃಯ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಕಾಸರಗೋಡಿನ ಮೆಹರೂಫ್ ಮತ್ತು ಮಹಮ್ಮದ್ ಅನೂಪ್ ಇವರುಗಳು ವೀರಾಜಪೇಟೆಯ ರವೂಫ್, ಹೆಗ್ಗಳ ಗ್ರಾಮದ ನಾಸೀರುದ್ದೀನ್, ಬೇಟೋಳಿಯ ವಾಜೀದ್, ಎಡಪಾಲದ ಯಾಹ್ಯಾ, ಕುಂಜಿಲದ ಅಕನಾಸ್, ಕೇರಳದ ಕಣ್ಣೂರಿನ ರಿಯಾಜ್ ಅಜ್ಮಲ್ ಹಾಗೂ ಸಫಾನ್ ಇವರುಗಳನ್ನು ಒಳಗೊಂಡ ತಂಡ ರಚಿಸಿಕೊಂಡು ಅಂತರಾಷ್ಟಿçÃಯ ಮಾದಕ ದ್ರವ್ಯ ಸಾಗಾಟ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬ್ಯಾಂಕಾಕ್ನಿAದ ಹೈಡ್ರೋ ಗಾಂಜಾವನ್ನು ಯಾಹ್ಯಾ ಎಂಬಾತ ಕಳೆದ ತಾ.೨೩ ರಂದು ರಾತ್ರಿ ೧೧-೩೦ ಗಂಟೆಗೆ ಬೆಂಗಳೂರಿನ ಅಂತರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ತಂದಿರುತ್ತಾನೆ. ನಂತರ ನಾಸೀರುದ್ದೀನ್, ಅಕನಾಸ್, ರಿಯಾಜ್ ಮತ್ತು ವಾಜೀದ್ ಸೇರಿ ಸ್ವಿಫ್ಟ್ ಕಾರಿನಲ್ಲಿ (ಕೆಎಲ್ ೭೨ ಡಿ ೬೬೯೭) ಬೆಂಗಳೂರಿನ ವಿಮಾನ ನಿಲ್ದಾಣದಿಂದ ಯಾಹ್ಯಾನನ್ನು ಕರೆದುಕೊಂಡು ಕೊಡಗು ಜಿಲ್ಲೆಗೆ ಆಗಮಿಸಿ ಗೋಣಿಕೊಪ್ಪ ಬೆಳ್ಳಿಯಪ್ಪ ರೆಸಿಡೆನ್ಸಿಯಲ್ಲಿ ತಂಗಿರುತ್ತಾರೆ. ಕೇರಳದ ಮೆಹರೂಫ್ನ ಮುಂದಿನ ನಿರ್ದೇಶನಕ್ಕಾಗಿ ಈ ತಂಡ ಕಾಯುತ್ತಿದ್ದು, ಒಂದೇ ಸ್ಥಳದಲ್ಲಿ ಇದ್ದರೆ ಯಾರಿಗಾದರೂ ಅನುಮಾನ ಬರುತ್ತದೆ ಎಂದು ತಿಳಿದು ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಮಾಡುವ ಉದ್ದೇಶದಿಂದ ವೀರಾಜಪೇಟೆಯಿಂದ ಮಡಿಕೇರಿಗೆ ಪ್ರಯಾಣ ಬೆಳೆಸಿದ್ದಾರೆ. ಕೊಡಗು ಪೊಲೀಸ್ ಇಲಾಖೆಯ ಡಿ.ಸಿ.ಆರ್.ಬಿ. ಘಟಕದ ಪೊಲೀಸ್ ನಿರೀಕ್ಷಕ ಐ.ಪಿ. ಮೇದಪ್ಪ ಮತ್ತು ತಂಡದವರಾದ ಯೋಗೇಶ್, ನಿರಂಜನ್, ಶರತ್ ರೈ ಅವರಿಗೆ ದೊರೆತÀ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪಾಧೀಕ್ಷಕ ಮಹೇಶ್ ಕುಮಾರ್ ಅವರಿಗೆ ತಿಳಿಸಿದ್ದಾರೆ, ಅವರ ಸೂಚನೆಯಂತೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಲೋಕೇಶ್ ಡಿಸಿಆರ್ಬಿ ಘಟಕದ ಯೋಗೇಶ್, ನಿರಂಜನ್, ರವಿಕುಮಾರ್ ಮತ್ತೋರ್ವ ಸಿಬ್ಬಂದಿ ರವಿ ಕುಮಾರ್, ಮುರಳಿ, ಶರತ್ ರೈ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳೊAದಿಗೆ ವೀರಾಜಪೇಟೆ ರಸ್ತೆಯಲ್ಲಿರುವ ರಮ್ಯ ಸರ್ವಿಸ್ ಸ್ಟೇಷನ್ ಬಳಿಯಲ್ಲಿ ತಾ. ೨೮ರಂದು ಬೆಳಗ್ಗಿನ ಜಾವ ೧ ಗಂಟೆಗೆ ದಾಳಿ ಮಾಡಿ ಐವರನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ ಸುಮಾರು ೩ ಕೋಟಿ ಬೆಲೆ ಬಾಳುವ ೩ ಕೆ.ಜಿ. ೩೧ ಗ್ರಾಂ ತೂಕದ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಕಾರನ್ನು ವಶಕ್ಕೆ ಪಡೆದುಕೊಂಡಿರುವದಾಗಿ ಮಾಹಿತಿ ನೀಡಿದರು.
(ಮೊದಲ ಪುಟದಿಂದ)
ಮತ್ತೋರ್ವನ ಬಂಧನ
ಈ ಕೃತ್ಯಕ್ಕೆ ಸಹಕರಿಸಿದ ಮತ್ತೋರ್ವ ಆರೋಪಿ ರವೂಫ್ ಪ್ರಸ್ತುತ ಬೆಂಗಳೂರರಿನಲ್ಲಿ ವಾಸ ಮಾಡಿಕೊಂಡಿದ್ದು, ಈತನನ್ನು ತಾ. ೨೮ರಂದು ಬೆಂಗಳೂರಿನ ಸಂಜಯನಗರ ಲೇಔಟ್ ನಿವಾಸದಲ್ಲಿ ನಾಪೋಕ್ಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ನಿರಂಜನ್, ಪ್ರದೀಪ್ ಕುಮಾರ್, ಮುರಳಿ ಮತ್ತು ನವೀನ್ ಅವರುಗಳನ್ನೊಳಗೊಂಡÀ ತಂಡ ವಶಕ್ಕೆ ಪಡೆದಿರುವದಾಗಿ ತಿಳಿಸಿದರು.
ಪರಾರಿಯಾಗಲು ಯತ್ನ
ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇರಳದ ಮೆಹರೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್ಗೆ ಪರಾರಿಯಾಗಲು ಯತ್ನಿಸುತ್ತಿರುವಾಗ ಕೇರಳದ ಎರ್ನಾಕುಲಂ ಜಿಲ್ಲೆಯ ಎಸ್.ಪಿ. ವೈಭವ್ ಸಕ್ಷೇನಾ ಮತ್ತು ಕೊಚ್ಚಿನ್ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿ ಕೃಷ್ಣರಾಜ್ ಅವರುಗಳÀ ಸಹಕಾರದಿಂದ ಮಡಿಕೇರಿ ಗ್ರಾಮಾಂತರ ವೃತ್ತನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿ ಯೋಗೇಶ್, ಪ್ರಭಾಕರ್, ರಾಜೇಶ್ ಅವರುಗಳ ತಂಡ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವದಾಗಿ ಮಾಹಿತಿ ನೀಡಿದರು.
ಬಂಧನಕ್ಕೆ ಕ್ರಮ
ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಮುಖ ಆರೋಪಿ, ಬ್ಯಾಂಕಾಕ್ನಲ್ಲಿರುವ ಮಹಮ್ಮದ್ ಅನೂಫ್ ಹಾಗೂ ತಂಡದಲ್ಲಿ ತೊಡಗಿಸಿಕೊಂಡಿರುವ ಅಜ್ಮಲ್ ಹಾಗೂ ಸಫಾನ್ನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದ್ದು, ಸದ್ಯದಲ್ಲೇ ಬಂಧಿಸುವುದಾಗಿ ಎಸ್ಪಿ ತಿಳಿಸಿದರು.೭೨ ಗಂಟೆಗಳ ತನಿಖೆ
ಇದೊಂದು ಅಪರೂಪದ ಪ್ರಕರಣವಾಗಿದ್ದು ಹೈಡ್ರೋ ಗಾಂಜಾ ಸಾಮಾನ್ಯ ಗಾಂಜಾಕ್ಕಿAತ ಹೆಚ್ಚು ನಶೆಯನ್ನು ಕೊಡುವ ಮಾದಕ ದ್ರವ್ಯವಾಗಿದೆ. ಹಾಗೂ ದುಬಾರಿ ಬೆಲೆಯದ್ದಾಗಿರುತ್ತದೆ. ಈ ಗಾಂಜಾವನ್ನು ವಿಭಿನ್ನ ರೀತಿಯ ಕೃತಕ ಬೆಳಕನ್ನು ಉಪಯೋಗಿಸಿ ಹಾಗೂ ಹವಾ ನಿಯಂತ್ರಿತ ಕೊಠಡಿಯಲ್ಲಿ ನೀರಿನಿಂದ ಬೆಳೆಯಲಾಗುತ್ತದೆ. ಈ ಪ್ರಕರಣವನ್ನು ಕೊಡಗು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಎಸ್., ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಪಿ.ಕೆ. ಅವರ ನೇತೃತ್ವದ ತಂಡ ಸತತ ೭೨ ಗಂಟೆಗಳ ಕಾಲ ತನಿಖೆಯಲ್ಲಿ ತೊಡಗಿಸಿಕೊಂಡು ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ. ಇದೊಂದು ವಿಶೇಷ ಪ್ರಕರಣವಾಗಿದ್ದು ಕೊಡಗು ಜಿಲ್ಲೆಯಲ್ಲಿ ಇದು ಪ್ರಥಮ ಪ್ರಕರಣವಾಗಿದೆ. ಇದರ ತನಿಖೆಯನ್ನು ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ ರಾಜು ಕೈಗೊಂಡಿರುತ್ತಾರೆ. ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಘಟಕದ ತಾಂತ್ರಿಕ ಸಿಬ್ಬಂದಿಗಳಾದ ರಾಜೇಶ್ ಸಿ.ಕೆ ಮತ್ತು ಪ್ರವೀಣ್ ಕುಮಾರ್ ತಾಂತ್ರಿಕ ಸಹಕಾರ ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದರು. ಗೋಷ್ಠಿಯಲ್ಲಿ ಎಎಸ್ಪಿ ಸುಂದರ್ರಾಜ್, ಡಿವೈಎಸ್ಪಿ ಮಹೇಶ್ಕುಮಾರ್, ವೃತ್ತ ನಿರೀಕ್ಷಕರುಗಳಾದ, ರಾಜು, ಮೇದಪ್ಪ, ಅನೂಪ್ ಮಾದಪ್ಪ, ಠಾಣಾಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ಮಾಹಿತಿ ನೀಡಲು ಮನವಿ: ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬAದಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಾಗೂ ಕೆ.ಎಸ್.ಪಿ. ತಂತ್ರಾAಶದ ಮೂಲಕ ಮಾಹಿತಿ ನೀಡುವಂತೆ ಹಾಗೂ ಸಹಕರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.