ಮಡಿಕೇರಿ, ಅ. ೨: ಅನುದಾನ ಬಿಡುಗಡೆಯಾಗಿಲ್ಲ ಎಂಬ ಆತಂಕದ ನಡುವೆ ರಾಜ್ಯ ಸರಕಾರ ಹಿಂದೆAದಿಗಿAತ ಹೆಚ್ಚಿನ ಹಣವನ್ನು ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.
ಮಡಿಕೇರಿ ದಸರಾಕ್ಕೆ ರೂ. ೧.೫೦ ಕೋಟಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ರೂ. ೭೫ ಲಕ್ಷ ಅನುದಾನವನ್ನು ಘೋಷಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಗೀತಾಬಾಯಿ ಆದೇಶ ಹೊರಡಿಸಿದ್ದಾರೆ.
ಮಡಿಕೇರಿ ದಸರಾ ಉತ್ಸವಕ್ಕೆ ರೂ. ೨ ಕೋಟಿ, ಗೋಣಿಕೊಪ್ಪ ದಸರಾಕ್ಕೆ ರೂ. ೧.೨೦ ಕೋಟಿ ಅನುದಾನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ನಿರ್ದೇಶಕರು ಕೋರಿದ್ದರು. ಅದರನ್ವಯ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರು,
(ಮೊದಲ ಪುಟದಿಂದ) ಜಿಲ್ಲಾಧಿಕಾರಿ ವೆಂಕಟ್ ರಾಜಾ ಸರ್ಕಾರಕ್ಕೆ ಅನುದಾನ ಕೋರಿ ಪತ್ರ ಬರೆದು ಆಡಳಿತಾತ್ಮಕ ಪ್ರಕ್ರಿಯೆ ನಡೆಸಿದ್ದರು.
ಹೊರಡಿಸಿದ ಆದೇಶದಲ್ಲಿ ಬಿಡುಗಡೆ ಯಾದ ಅನುದಾನವನ್ನು ಅದೇ ಉದ್ದೇಶಕ್ಕೆ ಬಳಸಬೇಕು, ಮಂಜೂರು ಮಾಡಿದ ಅನುದಾನ ಸಮರ್ಪಕವಾಗಿ ಬಳಕೆಯಾದ ಬಗ್ಗೆ ಲೆಕ್ಕಪರಿಶೋ ಧಕರಿಂದ ದೃಢೀಕರಿಸಿ ಲೆಕ್ಕಪಟ್ಟಿ ಹಾಗೂ ಹಣಬಳಕೆ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಬೇಕು, ಕಾರ್ಯಕ್ರಮ ನಡೆದಿರುವ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಇವರಿಂದ ಖಾತ್ರಿಪಡಿಸಿಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.
ಮಂಟಪಗಳಿಗೆ ಹೆಚ್ಚಿನ ಅನುದಾನ
ಮಡಿಕೇರಿ ದಸರಾಕ್ಕೆ ಹಿಂದೆAದಿಗಿAತ ಹೆಚ್ಚಿನ ಹಣ ಬಿಡುಗಡೆಯಾಗಿದೆ. ಇದನ್ನು ಬಳಸಿಕೊಂಡು ಉತ್ತಮ ಕಾರ್ಯಕ್ರಮವನ್ನು ನಡೆಸಲಾಗುವುದು. ಮಂಟಪಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಹಣ ನೀಡಲಾಗುವುದು. ಯಾವುದೇ ಕಾರಣಕ್ಕೂ ಮಂಟಪ ಸಮಿತಿಗಳಿಗೆ ಅನ್ಯಾಯ ಮಾಡುವುದಿಲ್ಲ. ಈ ಬಾರಿ ಮಡಿಕೇರಿ ದಸರಾಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವನಾರಾಯಣ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಮಡಿಕೇರಿಯಲ್ಲಿ ಕಾಫಿ ದಸರಾ ಹಮ್ಮಿಕೊಳ್ಳಲಾಗಿದೆ. ಯಶಸ್ವಿ ಹಾಗೂ ವ್ಯವಸ್ಥಿತ ಕಾರ್ಯಕ್ರಮಕ್ಕೆ ಶ್ರಮಿಸಲಾಗುವುದು.
-ಡಾ.ಮಂತರ್ ಗೌಡ, ಮಡಿಕೇರಿ ಶಾಸಕ
ಆರ್ಥಿಕ ಶಿಸ್ತಿನೊಂದಿಗೆ
ಆಚರಣೆ
ಗೋಣಿಕೊಪ್ಪ ದಸರಾಕ್ಕೆ ಕಳೆದ ವರ್ಷ ರೂ.೬೦ ಲಕ್ಷ ಅನುದಾನ ಬಂದಿತ್ತು. ಈ ಬಾರಿ ರೂ. ೭೫ ಲಕ್ಷ ಬಂದಿದೆ. ಆರ್ಥಿಕ ಶಿಸ್ತು ಪಾಲನೆಯೊಂದಿಗೆ ದಸರಾವನ್ನು ವಿಜೃಂಭಣೆಯಿAದ ಆಚರಿಸಲಾಗುವುದು. ಸಮಿತಿ ಜವಾಬ್ದಾರಿಯೊಂದಿಗೆ ಪಾರದರ್ಶಕವಾಗಿ ನಡೆಸಬೇಕು. ಗೋಣಿಕೊಪ್ಪದ ೧೦ ಮಂಟಪಗಳಿಗೂ ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ನೀಡ ಲಾಗುವುದು.
-ಎ.ಎಸ್. ಪೊನ್ನಣ್ಣ,
ವೀರಾಜಪೇಟೆ ಶಾಸಕ
ವ್ಯವಸ್ಥಿತವಾಗಿ ಆಯೋಜನೆ
ಸರಕಾರದಿಂದ ಅನುದಾನ ಅಂತಿಮಗೊAಡು ಆದೇಶ ಬಂದಿದೆ. ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾವನ್ನು ಎಲ್ಲರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುವುದು. ಎಲ್ಲ ಸಿದ್ಧತೆ ನಡೆಯುತ್ತಿದ್ದು, ವಿನೂತನ ಕಾರ್ಯಕ್ರಮಗಳಿಂದ ಜನರನ್ನು ದಸರಾ ಆಕರ್ಷಿಸಲಿದೆ. ತಾ. ೩ ರಂದು (ಇಂದು) ಕರಗೋತ್ಸವ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ ದೊರೆಯಲಿದ್ದು, ತಾ. ೪ ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
-ವೆಂಕಟ್ ರಾಜಾ, ಜಿಲ್ಲಾಧಿಕಾರಿ, ಅಧ್ಯಕ್ಷ, ಮಡಿಕೇರಿ ನಗರ ದಸರಾ ಸಮಿತಿ