ಚೆಟ್ಟಳ್ಳಿ, ಅ. ೨: ಮಹಾರಾಷ್ಟçದ ಸಾಂಗ್ಲಿ ಜಿಲ್ಲೆ ದತ್ತ ತಾಲೂಕಿನ ಗುಡ್ಡಾಪುರ ಶ್ರೀ ದಾನಮ್ಮದೇವಿ ದೇವಸ್ಥಾನದ ಸುಕ್ಷೇತ್ರದಲ್ಲಿ ನಡೆದ “ಕರ್ನಾಟಕ ಸಂಭ್ರಮ-೫೦” ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನೀಕಂಡ ಮಹೇಶ್ ನಾಚಯ್ಯ ಅವರ ನೇತೃತ್ವದಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ಕಲಾವಿದರ ತಂಡದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕೊಡಗಿನ ಸಾಂಸ್ಕೃತಿಕ ವೈಭವದ ಅನಾವಣಗೊಳಿಸಲಾಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಜಿಲ್ಲಾಡಳಿತ ಹಾಗೂ ಶ್ರೀ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಹಾಗೂ ಕರ್ನಾಟಕ-ಮಹಾರಾಷ್ಟç ರಾಜ್ಯದ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೆಸರಾಯಿತು. ಕರ್ನಾಟಕ ಉಸಿರಾಯಿತು ಕನ್ನಡ ಧ್ಯೇಯ ಉದ್ದೇಶದಲ್ಲಿ ಕರ್ನಾಟಕ ಸಂಭ್ರಮ-೫೦ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬೆಕ್ಕೆಸೊಡ್ಲೂರಿನ ಮಂದತವ್ವ ಟ್ರಸ್ಟ್ ಕಲಾವಿದರಾದ ಮಲ್ಲಮಾಡ ಶ್ಯಾಮಲ, ಸುಳ್ಳಿಮಾಡ ಕೆ. ಭವಾನಿ, ಮಲ್ಲಮಾಡ ಯು. ಶ್ವೇತ, ಸುಳ್ಳಿಮಾಡ ಎಂ. ಕರೀಶ್ಮ, ಗುಡಿಯಂಗಡ ಲಿಕ್ಕಿ ಬೋಪಣ್ಣ, ಮಚ್ಚಮಾಡ ವಿನೋದ್ ಭಾಗವಹಿಸಿದ್ದರು.
ಕರ್ನಾಟಕ ವಿವಿಧ ಜಾನಪದ ಕಲಾತಂಡದಿAದ ಡೊಳ್ಳುಕುಣಿತ, ಕರಡಿ ಮಜಲು, ವೀರಗಾಸೆ, ತಾಸೆವಾದನ, ಹಾಲಕ್ಕಿ ಕುಣಿತ, ಸುಗ್ಗಿಕುಣಿತ ಹೀಗೆ ಹಲವು ಸಾಂಸ್ಕೃತಿಕ ಕಲಾ ಪ್ರದರ್ಶನದ ಜೊತೆಗೆ ಕೊಡಗಿನ ಸಾಂಸ್ಕೃತಿಕ ನೃತ್ಯ ಗಮನಸೆಳೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಸಚಿವರುಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಸಾಹಿತ್ಯ, ನಾಟಕ, ಲಲಿತಕಲಾ, ಯಕ್ಷಗಾನ, ಕೊಂಕಣಿ, ಬ್ಯಾರಿ, ಅರೆಭಾಷಾ ಹಾಗು ಕೊಡವ ಅಕಾಡೆಮಿಯ ಅಧ್ಯಕ್ಷರುಗಳು ಭಾಗವಹಿಸಿದ್ದರು.