ಕಣಿವೆ, ಅ. ೨: ವಿದ್ಯಾ ಗಣಪತಿ ದೇವಾಲಯವನ್ನು ನಿರ್ಮಿಸುವ ಸಂಬAಧ ಕೂಡಿಗೆ ಗ್ರಾಮಸ್ಥರು ಒಗ್ಗೂಡಿ ಸಭೆ ನಡೆಸಿ ಚರ್ಚಿಸಿದರು. ಕಳೆದ ೪೫ ವರ್ಷಗಳ ಹಿಂದೆ ದೇಗುಲ ನಿರ್ಮಾಣದ ದಿಸೆಯಲ್ಲಿ ಬೇಳೂರಿನ ಭಕ್ತರೊಬ್ಬರು ಕೂಡಿಗೆಯ ವಿದ್ಯಾ ಗಣಪತಿ ಸೇವಾ ಸಮಿತಿಗೆ ಜಾಗವನ್ನು ಉದಾರವಾಗಿ ನೀಡಿದ್ದರು. ಆದರೆ ಗ್ರಾಮಸ್ಥರಲ್ಲಿ ದೇವಾಲಯ ನಿರ್ಮಾಣದ ಸಂಬAಧ ಮೂಡದ ಒಮ್ಮತದಿಂದಾಗಿ ಇದೂವರೆಗೂ ಅದು ಕಾರ್ಯೋನ್ಮುಖವಾಗಲೇ ಇಲ್ಲ. ಇದೀಗ ಕೂಡಿಗೆಯ ಭಕ್ತಾದಿಗಳು ಸೇರಿ ವಕೀಲ ಕೆ.ಬಿ. ಮೋಹನ್ ನೇತೃತ್ವದಲ್ಲಿ ಸಭೆ ನಡೆಸಿದರು.
ಭಕ್ತರು ಗಣಪತಿ ದೇವಾಲಯ ನಿರ್ಮಾಣಕ್ಕೆಂದು ಅಗತ್ಯ ವಾದ ನಿವೇಶನವನ್ನು ನೀಡಿದ್ದರೂ ಕೂಡ ದೇವಾಲಯ ನಿರ್ಮಾಣ ಮಾಡದೇ ವಿಳಂಬ ಧೋರಣೆ ಅನುಸರಿಸಿದ್ದು ಸಾಕು.
ಇನ್ನಾದರೂ ಕಾರ್ಯ ಪ್ರವೃತ್ತರಾಗಿ ಎಂಬ ಎಚ್ಚರಿಕೆಯ ಸಂದೇಶದಡಿ ಸಭೆ ಸೇರಿದ ಸಮಾನ ಮನಸ್ಕರು ಕೂಡಿಗೆಯ ಸೋಮವಾರಪೇಟೆ ರಸ್ತೆಯ ಮುಖ್ಯ ವೃತ್ತದಲ್ಲಿ ಗಣಪತಿ ದೇವಾಲಯ ನಿರ್ಮಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವ ವಿಚಾರವಾಗಿ ಚರ್ಚಿಸಿದರು.
ಸಭೆಯಲ್ಲಿ ಕೂಡಿಗೆ ಗ್ರಾ.ಪಂ. ಸದಸ್ಯರಾದ ಅರುಣ್ ರಾವ್, ಅನಂತು, ಶಿವಕುಮಾರ್, ಚಂದ್ರಶೇಖರ್, ಸುಬ್ಬಯ್ಯ, ಕೇಶವ ರೈ, ನಂಜಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಮಂಜುನಾಥ್, ಸುನಿಲ್ ರಾವ್ ರಕ್ಷಿತ್ ಮೊದಲಾದವರು ಇದ್ದರು.