ಮಡಿಕೇರಿ, ಅ. ೧: ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂWದÀ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಮದೆ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಆಗೋಳಿಕಜೆ ಅವರು, ಸಂಘವು ರೂ. ೨೫.೦೨ ಲಕ್ಷ ಲಾಭ ಗಳಿಸಿದೆ ಎಂದರು. ಹಾಲಿ ಆಡಳಿತ ಮಂಡಳಿಯು ಕಳೆದ ವರ್ಷದಲ್ಲಿ ಸದಸ್ಯರ ಖಾತೆಗಳಿಗೆ ಪ್ರಿಂಟೆಡ್ ಪಾಸ್ ಪುಸ್ತಕ ನೀಡಿದೆ. ಇ-ಸ್ಟಾö್ಯಂಪ್ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಘದ ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಕೆ. ಬ್ಯಾಂಕಿAಗ್ ವಿಭಾಗಕ್ಕೆ ನೂತನ ಕೌಂಟರ್, ಸಂಘದ ಸುತ್ತ ಕಾಂಪೌAಡ್ ನಿರ್ಮಾಣ, ಬೋರ್‌ವೆಲ್ ಕೊರೆಯಿಸಿ ಸಮರ್ಪಕ ನೀರಿನ ವ್ಯವಸ್ಥೆ, ಸಂಘದ ಸಭಾಂಗಣವನ್ನು ದುರಸ್ತಿಗೊಳಿಸಿ ಹೊಸ ವಿನ್ಯಾಸದೊಂದಿಗೆ ಸುಸಜ್ಜಿತಗೊಳಿಸಲಾಗಿದೆ.
ಸದಸ್ಯರ ಅನುಕೂಲಕ್ಕಾಗಿ ಸಾಲದ ಬಡ್ಡಿಯನ್ನು ಕಡಿಮೆ ಮಾಡಲಾಗಿದೆ. ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ ಎಂದರು. ಸಂಘವು ಉತ್ತಮ ರೀತಿಯಲ್ಲಿ ಮುನ್ನಡೆಯಬೇಕಾದರೆ ಸದಸ್ಯರೆಲ್ಲರ ಪಾಲ್ಗೊಳ್ಳುವಿಕೆ ಅವಶ್ಯವಾದದ್ದು, ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಂಘದಲ್ಲಿ ವ್ಯವಹಾರವನ್ನು ಮಾಡಬೇಕಾಗಿ ಕೇಳಿಕೊಂಡರು. ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೨೫.೦೨ ಲಕ್ಷ ಲಾಭವನ್ನು ಪಡೆದಿರುತ್ತದೆ ಮತ್ತು ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ‘ಎ’ ಶ್ರೇಣಿ ಪಡೆದಿರುತ್ತದೆ ಎಂದು ಸಭೆಗೆ ತಿಳಿಸಿದರು.
ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಪಡೆದ ೧೨ ಜನ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಮತ್ತು ಪ್ರೋತ್ಸಾಹ ಧನವನ್ನು ವಿತರಿಸಿದರು. ಸಭೆಯಲ್ಲಿ ಪೂರ್ವ ನಿಯೋಜಿತ ಅಜೆಂಡಾದAತೆ ವಿಚಾರಗಳನ್ನು ಚರ್ಚಿಸಲಾಗಿ, ಸದಸ್ಯರು ಸಂಘದ ಅಭಿವೃದ್ಧಿಗೆ ಪೂರಕವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಸಜನ್ ಬಿ.ಸಿ., ನಿರ್ದೇಶಕರುಗಳಾದ ಕಿಮ್ಮುಡಿರ ಎ. ಜಗದೀಶ್, ಮುದ್ಯನ ಬಿ. ಚಂದ್ರಶೇಖರ್, ಕೊಲ್ಯದ ಆರ್. ಗಿರೀಶ್, ಯೋಗೇಶ್ ಬಿ.ಎಸ್., ರಾಜು ಕೆ.ಆರ್., ಸೀನಾ ಪಿ.ಬಿ., ಬೋಮ್ಮುಡಿರ ಕೆ. ನಾಗವೇಣಿ, ಮುದ್ಯನ ಎಲ್. ಸುಜ್ಯೋತಿ, ಮುಕ್ಕಾಟಿ ಎ. ಸವಿತ, ಹುದೇರಿ ಎ. ಅರುಣ, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಪೊನ್ನಪ್ಪ ಎನ್.ಟಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗೀರಥಿ ಹೆಚ್.ಜಿ. ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.