ಮಡಿಕೇರಿ, ಅ. ೧: ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನಾ ಘಟಕದಿಂದ ಗಿಡ ನೆಡುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಅವಿನಾಶ್ ಹೆಚ್.ಎನ್, ಪದವಿ ಪ್ರಾಂಶುಪಾಲ ಹರೀಶ್ ಬಿ.ಆರ್, ರಾಷ್ಟಿçÃಯ ಸೇವಾ ಯೋಜನಾ ಘಟಕ ಯೋಜನಾ ಅಧಿಕಾರಿಯಾದ ಸಚಿನ್ ಸಿ, ಉಪ ಯೋಜನಾ ಅಧಿಕಾರಿ ಛಾಯಾ ಎಸ್.ಡಿ. ಹಾಗೂ ಯೋಜನಾ ಘಟಕದ ಸ್ವಯಂ ಸೇವಕರು ಹಾಜರಿದ್ದರು.