ಮುಳ್ಳೂರು: ಭಾರತದದಲ್ಲಿ ಬೆಳೆÀಯುತ್ತಿರುವ ಉತ್ಕೃಷ್ಟ ಗುಣಮಟ್ಟದ ಕಾಫಿ ಶೇ೭೦ ರಷ್ಟು ಕಾಫಿ ಉತ್ಪನ್ನ ವಿದೇಶಕ್ಕೆ ರಪ್ತಾಗುತ್ತಿದ್ದರೂ ಸಹ ಸ್ಥಳೀಯ ಮಟ್ಟದಲ್ಲಿ ಜನರು ಕಡಿಮೆ ಪ್ರಮಾಣದಲ್ಲಿ ಕಾಫಿಯನ್ನು ಸೇವಿಸುತ್ತಿರುವುದು ಕಳವಳಕಾರಿ ಯಾಗಿದೆ ಎಂದು ಸೋಮವಾರಪೇಟೆ ಕಾಫಿ ಮಂಡಳಿಯ ಹಿರಿಯ ವಿಸ್ತರಣಾಧಿಕಾರಿ ರಂಜಿತ್ ಕುಮಾರ್ ಅಭಿಪ್ರಾಯಪಟ್ಟರು.

ಶನಿವಾರಸಂತೆ ಕೆಆರ್‌ಸಿ ವೃತ್ತದಲ್ಲಿ ಕಾಫಿ ಮಂಡಳಿ ಸೋಮವಾರಪೇಟೆ ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಫಿ ಬೆಳೆಗಾರರು ಜನರು ಕಾಫಿಯನ್ನು ಸೇವಿಸುವಂತೆ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕಾಗುತ್ತದೆ. ಈ ಮೂಲಕವಾಗಿ ಸ್ಥಳೀಯ ಜನರು ಕಾಫಿಯನ್ನು ಸೇವಿಸುತ್ತಾರೆ ಜನರು ಕಾಫಿಯನ್ನು ಆರೋಗ್ಯಕರವಾದ ಪೇಯವಾಗಿ ಸೇವಿಸುವುದ್ದರಿಂದ ಕಾಫಿ ಮಾರುಕಟ್ಟೆ ಬೃಹತ್ ಉದ್ದಿಮೆಯಾಗಿ ಬೆಳೆಯುತ್ತದೆ ಬೆಳೆಗಾರರು ಗುಣಮಟ್ಟದ ಕಾಫಿಯನ್ನು ಬೆಳೆಯಬೇಕಾಗುತ್ತದೆ ಎಂದರು. ತಾ. ೬ ಮತ್ತು ೭ ರಂದು ಮಡಿಕೇರಿಯಲ್ಲಿ ನಡೆಯುವ ಕಾಫಿ ದಸರಾ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರು ಪಾಲ್ಗೊಂಡು ಕಾಫಿ ಉತ್ಪನ್ನವನ್ನು ಪ್ರಚಾರಗೊಳಿಸಲು ಭಾಗಿಯಾಗುವಂತೆ ಮನವಿ ಮಾಡಿದರು. ಕಾಫಿ ಮಂಡಳಿಯ ಮತ್ತೊರ್ವ ಹಿರಿಯ ವಿಸ್ತರಣಾಧಿಕಾರಿ ಲಕ್ಷಿö್ಮಕಾಂತ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯ ಚಂದ್ರಕಾAತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಿ.ಎಲ್.ವರ್ಷಿತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ವೇತ ವಸಂತ್, ಕಾಫಿ ಬೆಳೆಗಾರ ಎಚ್.ವಿ.ದಿವಾಕರ್, ಕಾರ್ಯಕ್ರಮ ಆಯೋಜಕ ಕೆ.ಸಿ.ಅಶೋಕ್ ಮುಂತಾದವರಿದ್ದರು. ದಿನದ ಅಂಗವಾಗಿ ಸಾರ್ವಜನಿಕರಿಗೆ ಕಾಫಿ ಪೇಯವನ್ನು ವಿತರಿಸಲಾಯಿತು.

ಚೆಟ್ಟಳ್ಳಿ: ಚೆಟ್ಟಳ್ಳಿಯ ಕಾಫಿ ಉಪಸಂಶೋಧನಾ ಕೇಂದ್ರದಲ್ಲಿ ಅಂತರರಾಷ್ಟಿçÃಯ ಕಾಫಿ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಮ್ ಶಾಮ್ ಮಾತನಾಡಿ, ಕಾಫಿ ಹಾಗೂ ಆರೋಗ್ಯದ ಬಗ್ಗೆ ಕೇಂದ್ರದ ಉಪನಿರ್ದೇಶಕರಾದ ಡಾ. ಜೀನಾ ದೇವಸೀಯ ಅಂತರರಾಷ್ಟಿçÃಯ ಕಾಫಿ ದಿನದ ಮಹತ್ವದ ಬಗ್ಗೆ ಮಾತನಾಡಿ, ಎಲ್ಲರೂ ಕಾಫಿಯನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಉತ್ತೇಜನ ನೀಡಬೇಕೆಂದರು.

ಕಾಫಿ ಮಂಡಳಿಯ ನಿವೃತ್ತ ಉಪನಿರ್ದೇಶಕ ಡಾ. ಶ್ರೀಧರನ್ ಹಾಗೂ ಕಂಡಕರೆ ಹಿರಿಯ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯ ರತೀಶ್ ಕುಮಾರ್ ಭಾಗವಹಿಸಿದ್ದರು. ಅಂತರರಾಷ್ಟಿçÃಯ ಕಾಫಿ ದಿನದ ಅಂಗವಾಗಿ ಕಾಫಿ ಮಂಡಳಿಯ ಸಿಬ್ಬಂದಿಗಳಿಗೆ, ಕಾರ್ಮಿಕ ವರ್ಗದವರಿಗೆ, ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕಾಫಿಯನ್ನು ವಿತರಿಸುವ ಮೂಲಕ ಕೊಡಗಿನ ಕಾಫಿಯ ಸ್ವಾದವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕಾಫಿ ಉಪ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಮಂಜುನಾಥ ರೆಡ್ಡಿ, ಡಾ. ಮಂಜುನಾಥ್, ಡಾ. ನಾಗರಾಜ್ ಗೋಕಾವಿ, ಸಿಬ್ಬಂದಿಗಳು ಹಾಜರಿದ್ದರು.