ಸೋಮವಾರಪೇಟೆ, ಅ. ೧: ಇಲ್ಲಿನ ಶ್ರೀ ಬಸವೇಶ್ವರ ದೇವಾಲಯ ಸಮಿತಿ, ವೀರಶೈವ ಸಮಾಜ, ಅಕ್ಕನ ಬಳಗ ಹಾಗೂ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಅ.೩ರಿಂದ ೧೨ರ ವರೆÀಗೆ ೭ನೇ ವರ್ಷದ ಅದ್ದೂರಿ ಶರನ್ನವರಾತ್ರಿ ಕಾರ್ಯಕ್ರಮ ನಡೆಸಲಾಗುವುದು ಎಂದು ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ವಿರಕ್ತ ಮಠದ ಶ್ರೀ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅ. ೩ರಂದು ಬೆಳಿಗ್ಗೆ ೮.೪೫ಕ್ಕೆ ಆನೆಕೆರೆಯಿಂದ ಗಂಗಾಪೂಜೆಯ ನಂತರ ಶ್ರೀ ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ಘಟಸ್ಥಾಪನೆ ಮಾಡಲಾಗುವುದು ಎಂದರು.

ನAತರ ಹೂವಿನ ಅಲಂಕಾರ, ರಾಜೋಪಚಾರ ಪೂಜೆ ಮತ್ತು ಶರನ್ನವರಾತ್ರಿ ವಿವಿಧ ಪೂಜೆಗಳು ನಡೆಯುವುದು. ಅ.೪ರಂದು ಸಂಜೆ ೬.೩೦ಕ್ಕೆ ಬಳೆ ಅಲಂಕಾರ, ೫ ರಂದು ಬಾಳೆ ಎಲೆ ಅಲಂಕಾರ, ೬ರಂದು ದೊನ್ನೆ ಅಲಂಕಾರ, ೭ರಂದು ವೀಳ್ಯದೆಲೆ ಅಲಂಕಾರ, ೮ರಂದು ನವಿಲುಗರಿ ಅಲಂಕಾರ, ೯ರಂದು ತರಕಾರಿ ಅಲಂಕಾರ, ೧೦ರಂದು ನಿಂಬೆಹಣ್ಣು ಮತ್ತು ಬೇವಿನಸೊಪ್ಪು ಅಲಂಕಾರ, ೧೧ರಂದು ತಿಂಡಿ ಅಲಂಕಾರ ಹಾಗೂ ವಿಶೇಷ ಪೂಜೆಗಳನ್ನು ನಡೆಯಲಿವೆ ಎಂದು ಮಾಹಿತಿಯಿತ್ತರು. ತಾ. ೧೨ರಂದು ಉಯ್ಯಾಲೋತ್ಸವ ಪಂಚಾಮೃತ ಅಭಿಷೇಕ ನಡೆಯಲಿದ್ದು, ಸಂಜೆ ೬ಕ್ಕೆ ಬನ್ನಿ ಮುರಿದು ವಿಜಯದಶಮಿ ಆಚರಣೆ ಮಾಡಲಾಗುವುದು. ಶ್ರೀ ಆದಿಶಕ್ತಿ ಅಮ್ಮನವರಿಗೆ ಉಯ್ಯಾಲೋತ್ಸವ, ಕುಂಕುಮಾರ್ಚನೆ, ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಸಮಾಜದ ಶೆಟ್ರು ಬಿ.ಆರ್. ಮೃತ್ಯುಂಜಯ, ಕಾರ್ಯದರ್ಶಿ ಸಿ.ಸಿ. ನಾಗರಾಜು, ನಿರ್ದೇಶಕರುಗಳಾದ ಕೆ.ಎಸ್. ನಾಗೇಂದ್ರ ಹಾಗೂ ಎಚ್.ಎಸ್. ಯುವರಾಜ್ ಇದ್ದರು.