ಚೆಟ್ಟಳ್ಳಿ, ಸೆ. ೩೦: ಕೊಂಬು ಹಾಗೂ ಕಾಲಿಗೆ ಪ್ಲಾಸ್ಟಿಕ್ ಬಲೆ ಸಿಲುಕಿದ ಜಿಂಕೆ ಯೊಂದು ಬಿಡಿಸಿ ಕೊಳ್ಳಲು ಪರದಾಡಿತು.
ಹಲವು ವನ್ಯಜೀವಿಗಳು ರಸ್ತೆಬದಿಯಲ್ಲಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಜೀವಕ್ಕೆ ಹಾನಿ ಮಾಡಿಕೊಳ್ಳುವುದು, ವಾಹನ ಅಪಘಾತಕ್ಕೆ ಬಲಿಯಾಗುವುದು, ಬೇಟೆಗಾರರ ಉರುಳಿಗೆ ಸಿಲುಕಿಕೊಳ್ಳುವುದು ಕಂಡು ಬರುತ್ತಿದ್ದರೆ, ರಾಷ್ಟಿçÃಯ ಉದ್ಯಾನ ನಾಗರಹೊಳೆಯ ಗಿರಿಜನ ಹಾಡಿಯ ಸಮೀಪ ಜಿಂಕೆಗಳ ಹಿಂಡಿನಲ್ಲಿ ಒಂದು ಜಿಂಕೆಯ ಕೊಂಬು ಹಾಗೂ ಕಾಲಿಗೆ ಕಪ್ಪುಬಣ್ಣದ ನೆಟ್ ಮಾದರಿಯ ಪ್ಲಾಸ್ಟಿಕ್ ಬಲೆಯೊಂದು ಸುತ್ತಿಕೊಂಡ ಪರಿಣಾಮ ಬಿಡಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯವನ್ನು ಹವ್ಯಾಸಿ ಛಾಯಾಗ್ರಾಹಕ ಮಾಯಮುಡಿಯ ಅಪ್ಪನೆರವಂಡ ವಿನು ಕುಂಞಪ್ಪ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.