*ಗೋಣಿಕೊಪ್ಪ, ಸೆ. ೩೦: ಕೊಡಗಿನ ಜ್ವಲಂತ ಸಮಸ್ಯೆಗಳಾದ ಮಾನವ ಪ್ರಾಣಿ ಸಂಘರ್ಷ, ದೂರ ಸಂಪರ್ಕ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಮತ್ತು ರಸ್ತೆ ಸಮಸ್ಯೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸ ಲಾಗುವುದು ಎಂದು ಯದುವೀರ ಕೃಷ್ಣದತ್ತ ಜಯ ಚಾಮರಾಜೇಂದ್ರ ಒಡೆಯರ್ ಭರವಸೆ ನೀಡಿದರು.
ಹುದಿಕೇರಿ ಕೊಡವ ಸಮಾಜದಲ್ಲಿ ಭಾರತೀಯ ಜನತಾ ಪಕ್ಷದ ಹುದಿಕೇರಿ ಶಕ್ತಿ ಕೇಂದ್ರದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು. ಗೋಣಿಕೊಪ್ಪ ಕುಟ್ಟ ರಸ್ತೆಯನ್ನು ಮೇಲ್ದರ್ಜಿಗೇರಿಸುವ ಬಗ್ಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದು ಮುಂದಿನ ದಿನಗಳಲ್ಲಿ ರಸ್ತೆ ಕಾಮಗಾರಿಯನ್ನು ಅತಿ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರದಂತೆ ಪಕ್ಷ ದ್ವೇಷ ರಾಜಕಾರಣ ಮಾಡಲಿಲ್ಲ. ಭಾರತೀಯ ಜನತಾ ಪಕ್ಷವನ್ನು ಅಧಿಕಾರದಲ್ಲಿದ್ದಾಗ ೪೦% ಸರ್ಕಾರ ಎಂದು ಸುಳ್ಳು ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಇಂದು ಆಡಳಿತ ಪ್ರಾರಂಭದಿAದ ವಾಲ್ಮೀಕಿ ಹಗರಣ,
ಗೋಣಿಕೊಪ್ಪ - ಕುಟ್ಟ ರಸ್ತೆ ಮೇಲ್ದರ್ಜೆಗೆ ಅನುಮತಿ
(ಮೊದಲ ಪುಟದಿಂದ) ಮೂಡ ಹಗರಣ ಇಂತಹ ಹಲವಾರು ಹಗರಣಗಳಲ್ಲಿ ಸಿಲುಕಿ ರಾಜ್ಯದ ಜನತೆಗೆ ವಿಶ್ವಾಸದ್ರೋಹ ಎಸಗಿದೆ ಎಂದು ಕಿಡಿಕಾರಿದರು. ಬಿಜೆಪಿ ಸರಕಾರ ಜಾರಿಗೆ ತಂದ ವನ್ಯ ಪ್ರಾಣಿಗಳ ಉಪಟಳದಿಂದ ಉಂಟಾಗುವ ಮಾನವ ಸಂಘರ್ಷಕ್ಕೆ ಕಂಡುಕೊAಡ ಹಲವಾರು ಕಾರ್ಯಕ್ರಮಗಳನ್ನು ಕಾಂಗ್ರೆಸ್ ಕೈ ಬಿಟ್ಟಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಇಂದು ಬೊಬ್ಬೆ ಹೊಡೆಯುತ್ತಿರುವ ಸರಕಾರ ೨೦೧೦ರಲ್ಲಿ ತನ್ನದೇ ಕೇಂದ್ರ ಸರಕಾರ ಇದ್ದಾಗ ಕಸ್ತೂರಿರಂಗನ್ ವರದಿಗೆ ತನ್ನ ಅನುಮೋದನೆಯನ್ನು ನೀಡಿ ಇಂದು ನಾಟಕವಾಡುತ್ತಿದೆ.
ಕಾಂಗ್ರೆಸ್ ಪಕ್ಷವೇ ಈ ವರದಿಯ ಜಾರಿಗೆ ಅನುಮೋದನೆ ನೀಡಿ ಈಗ ವರದಿ ಕೈ ಬಿಡುವುದನ್ನು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಆರೋಪಿಸಿದರು. ಹುದಿಕೇರಿ ಶಕ್ತಿ ಪ್ರಮುಖ ಕುಪ್ಪಣಮಾಡ ಕುಶಾ, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ಹುದಿಕೇರಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಜ್ಜಿಕುಟ್ಟಿರ ಮುತ್ತಪ್ಪ, ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಣಮಾಡ ಕಾವೇರಮ್ಮ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಡ ರವೀಂದ್ರ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಚಿರಿಯಪಂಡ ಸಚಿನ್, ಬೊಜ್ಜಂಗಡ ಸುನಿಲ್ ಕುಮಾರ್ ಉಪಸ್ಥಿತರಿದ್ದರು.