ಸೋಮವಾರಪೇಟೆ, ಸೆ. ೨೯: ಕೊಡಗು ವಿಮೆನ್ಸ್ ಕಾಫೀ ಅಮೆಚೂರ್ ಬಾಡಿ ಸಂಸ್ಥೆ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಬಿಗ್ ಕಪ್ ಮಡಿಕೇರಿ, ಬೆರಿಸ್ ಅಂಡ್ ಲೀಗ್ಸ್, ಬ್ಲಾಸಮ್ ಅಗ್ರಿ ಶಾವರ್ಸ್ ಮತ್ತು ಕಾಫಿ ಬೋರ್ಡ್ ಆಫ್ ಇಂಡಿಯಾ ಇವುಗಳ ಸಹಯೋಗದೊಂದಿಗೆ ಅ. ೧ರಂದು ಅಂತರರಾಷ್ಟಿçÃಯ ಕಾಫಿ ದಿನಾಚರಣೆ ಆಚರಿಸಲಾಗುವುದು ಎಂದು ಸಂಸ್ಥೆಯ ಸಿಇಒ ಅನಿತಾ ನಂದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೬ರಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕಾಫಿ ಬಳಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅ. ೧ರಂದು ಸೋಮವಾರಪೇಟೆಯ ಚಿಕ್ಕಬಸಪ್ಪ ಕ್ಲಬ್ ಆವರಣ, ಪೊನ್ನಂಪೇಟೆಯ ಸಿಐಟಿ ಕಾಲೇಜಿನಲ್ಲಿ ಹಾಗೂ ಕುಟ್ಟದ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧೨-೩೦ರ ವರೆಗೆ ಮೂರು ಸಾವಿರ ಕಪ್ ಕಾಫಿಯನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಾಫಿ ಉದ್ಯಮವು ಬಿಕ್ಕಟ್ಟಿನಲ್ಲಿದ್ದಾಗ ಮತ್ತು ಕಾಫಿ ಬೆಲೆಗಳು ಅತ್ಯಂತ ಕಡಿಮೆ ಮಟ್ಟದಲ್ಲಿದ್ದಾಗ ೨೦೦೨ ರಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ರಚನೆಯಾಯಿತು. ಇಂದು ಸಂಸ್ಥೆಯಲ್ಲಿ ೪೦೦ಕ್ಕೂ ಹೆಚ್ಚು ಮಹಿಳಾ ಕಾಫಿ ಬೆಳೆಗಾರ ಸದಸ್ಯರನ್ನು ಹೊಂದಿದ್ದು, ಲಾಭದಾಯಕವಾಗಿ ಮುಂದುವರೆದಿದೆ ಎಂದರು.

ಕಾಫಿ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಕ್ಕೆ ಪ್ರಮಾಣೀಕರಣ ಪತ್ರದ ಅವಶ್ಯಕತೆ ಇದ್ದು, ಇದು ಕಾಫಿಯ ಮಾರುಕಟ್ಟೆಗೆ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬಹಳ ಮುಖ್ಯವಾಗಿದೆ. ಒಬ್ಬ ಬೆಳೆಗಾರರು ಈ ಪತ್ರವನ್ನು ಪಡೆಯಲು ಕಷ್ಟವಾಗಿರುವುದರಿಂದ ಸಂಸ್ಥೆ ಮೂಲಕ ಬಯೋಟಾದಂತಹ ಎಫ್‌ಪಿಓ ಗಳಿಗೆ ಬೆಳೆಗಾರರನ್ನು ಸೇರಲು ಪ್ರೋತ್ಸಾಹಿಸುತ್ತಿದ್ದೇವೆ. ಕಾಫಿ ಉತ್ಪಾದನೆ ಮತ್ತು ಮಾರ್ಕೆಟಿಂಗ್‌ನಲ್ಲಿ ತೊಡಗಿರುವ ಮಹಿಳೆಯರಿಗೆ ತರಬೇತಿ, ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕಾಫಿ ಪ್ರಚಾರಕ್ಕೆ ಸಹಾಯ ಮಾಡಲು, ಕಾಫಿ ಬಳಕೆಯನ್ನು ಹೆಚ್ಚಿಸುವುದು, ಕೃಷಿ ಕಾರ್ಮಿಕರು ಮತ್ತು ಹೋಟೆಲ್ ಅತಿಥಿಗಳಿಗೆ ದಕ್ಷಿಣ ಭಾರತದ ಉತ್ತಮ ಫಿಲ್ಟರ್ ಕಾಫಿಯನ್ನು ಹೇಗೆ ತಯಾರಿಸಬೇಕೆಂಬ ಮಾಹಿತಿ ಕಾಯಾ+ðಗಾರಗಳನ್ನು ನಡೆಸುತ್ತಿದ್ದೇವೆ. ಕಾಫಿ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತು ಚರ್ಮದ ಆರೈಕೆಗಾಗಿ ಸೌಂದರ್ಯವರ್ಧಕ ಉದ್ಯಮದಲ್ಲಿ ಕಾಫಿಯನ್ನು ಬಳಸುವುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೊಡಗಿನಲ್ಲಿ ಕಾಫಿಯ ಸುಸ್ಥಿರ ಬೇಸಾಯವನ್ನು ಮಾಡಲಾಗುತ್ತಿದೆ. ಜೀವ ವೈವಿಧ್ಯವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಸಸ್ಯ ಮತ್ತು ಪ್ರಾಣಿಗಳೆರಡನ್ನೂ ಸಂರಕ್ಷಿಸುತ್ತಿದ್ದೇವೆ. ಕಾಫಿಗೆ ಪೂರಕವಾಗಿ ಜೇನು ಸಾಕಾಣೆಯು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಸಸ್ಯಗಳು ಮತ್ತು ಬೆಳೆಗಳ ಪರಾಗಸ್ಪರ್ಶಕ್ಕೆ ಕೊಡುಗೆ ನೀಡುತ್ತದೆ. ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಸಹಾಯದಿಂದ ಜೇನು ಸಾಕಾಣೆಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಆಂತರಿಕವಾಗಿ ಕಾಫಿ ಬಳಕೆ ಕಡಿಮೆ ಇದ್ದು, ಬಳಕೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳಾ ಕಾಫಿ ಬೆಳೆಗಾರರು ಉತ್ತಮ ಕಾಫಿ ಬೆಳೆಸಲು ಮತ್ತು ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಣಿ ನರೇಂದ್ರ, ನಿರ್ದೇಶಕಿ ಅನುರಾಧ ಇದ್ದರು.