ಸಿದ್ದಾಪುರ, ಸೆ. ೨೯: ಕಾಡಾನೆಗಳು ಗಿಡಗಳನ್ನು ತುಳಿದು ಧ್ವಂಸಗೊಳಿಸಿರುವ ಘಟನೆ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ ಟೀವುಡ್ ಕಾಫಿ ತೋಟದೊಳಗೆ ಕಾಡಾನೆಗಳು ದಾಂಧಲೆ ನಡೆಸಿ ಫಸಲು ಇರುವ ಕಾಫಿ ಗಿಡಗಳನ್ನು ಹಾನಿಗೊಳಿಸಿವೆ.
ಇದಲ್ಲದೆ ಅಡಿಕೆ ಮರಗಳನ್ನು ಕೂಡ ನಾಶಗೊಳಿಸಿವೆ. ಇಂಜಲಗೆರೆ ಭಾಗದಲ್ಲಿಯೂ ಗದ್ದೆಗಳಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು ಕೃಷಿ ಮಾಡಿದ ಗದ್ದೆಯಲ್ಲಿ ಮನಬಂದAತೆ ಓಡಾಡಿ ಕೃಷಿಗಳನ್ನು ಹಾನಿಗೊಳಿಸಿವೆ.