ನಾಪೋಕ್ಲು, ಸೆ. ೨೮: ನಾಪೋಕ್ಲು ಇಂದಿರಾ ನಗರ ವಿವೇಕಾನಂದ ಸಂಘದ ವತಿಯಿಂದ ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಸುಕುಮಾರ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.

ಬಾವಲಿ ಗ್ರಾಮದ ಮುಖಂಡಬಾಣೆ ಪೈಸಾರಿ ನಿವಾಸಿ ಟ್ರಾö್ಯಕ್ಟರ್ ಡ್ರೆöÊವರ್ ಸುಕುಮಾರ ಅವರ ಮನೆಗೆ ತೆರಳಿದ ಸಂಘದ ಪದಾಧಿಕಾರಿಗಳು ಅವರ ಪತ್ನಿ ಚಿತ್ರ ಮತ್ತು ಮಗ ನವೀನ್ ಅವರಿಗೆ ರೂ. ೨೦ ಸಾವಿರ ಸಹಾಯ ಧನವನ್ನು ನೀಡಿದರು.

ಈ ಸಂದರ್ಭ ವಿವೇಕಾನಂದ ಸಂಘದ ಖಜಾಂಚಿ ಜಲೇಂದ್ರ, ಉಪಾಧ್ಯಕ್ಷ ಶಶಿ, ಸದಸ್ಯರಾದ ಪ್ರಕಾಶ್, ಸುನಿ, ಪಟ್ಟಬಿ ಪ್ರಕಾಶ್, ಶ್ರೀಧರ, ಗಣೇಶ, ಸಂದೇಶ, ನಾರಾಯಣ ಇನ್ನಿತರರು ಹಾಜರಿದ್ದರು.