ಮಡಿಕೇರಿ, ಸೆ. ೨೮: ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಮಡಿಕೇರಿಯ ಬಾಲ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಮುದ್ದಂಡ ಡಿ. ಬೋಪಣ್ಣ ಅವರು ಮಾತನಾಡಿ, ಸಂಘ ಸಾಲದ ಸುಳಿಯಲ್ಲಿ ಸಿಲುಕಿದ್ದು, ಎಲ್ಲರ ಸಹಕಾರದಿಂದ ಸಾಲ ಮರುಪಾವತಿ ಕಾರ್ಯವನ್ನು ಮಾಡಬೇಕಿದೆ ಎಂದರು. ಕರವಲೆ ಬಾಡಗ ಬಳಿ ಲಭಿಸಿರುವ ಜಾಗದಲ್ಲಿ ಕಚೇರಿ ಕಟ್ಟಡವನ್ನು ನಿರ್ಮಿಸಬೇಕು ಎಂದು ಅವರು ಸಭೆಗೆ ತಿಳಿಸಿದರು. ಆರ್ಥಿಕ ತೊಂದರೆಯಿAದ ಜಾಮೀನು ಸಾಲ ನೀಡಲಾಗದ ಬಗ್ಗೆ ಅವರು ಸಭೆಗೆ ವಿವರಿಸಿದರು. ನಿರ್ದೇಶಕ ಕೆ.ಎಂ. ಪೆಮ್ಮಯ್ಯ ಅವರು ಸ್ವಾಗತಿಸಿ ಕುಕ್ಕೇರ ಟಿ. ಲಕ್ಷö್ಮಣ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.