*ಗೋಣಿಕೊಪ್ಪ, ಸೆ. ೨೮: ಗೋಣಿಕೊಪ್ಪ ಗ್ರಾಮೀಣ ಕೂಟ ಸಂಸ್ಥೆ ವತಿಯಿಂದ ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಚಟುವಟಿಕೆಯ ಪ್ರೋತ್ಸಾಹಕ್ಕೆ ರೂ. ೫೦,೦೦೦ ಮೌಲ್ಯದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
೩೦ ಕುರ್ಚಿಗಳು, ೪ ಸೀಲಿಂಗ್ ಫ್ಯಾನ್, ೧ ಕೂಲರ್, ೨ ಗ್ರೀನ್ ಬೋರ್ಡ್ ಮತ್ತು ಕುಡಿಯುವ ನೀರಿನ ಘಟಕಗಳನ್ನು ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಅವರಿಗೆ ಗ್ರಾಮೀಣ ಕೂಟ ಸಂಸ್ಥೆಯ ಹುಣಸೂರು ವಲಯ ವ್ಯವಸ್ಥಾಪಕ ಸಂದೇಶ್ ಹಸ್ತಾಂತರಿಸಿದರು.
ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶಕ್ಕೆ ಸಂಸ್ಥೆ ಶಾಲೆಗೆ ಬೇಕಾದಂತಹ ಅಗತ್ಯತೆಯನ್ನು ಪೂರೈಸಲು ಮುಂದಾಗಿದೆ ಎಂದು ಗ್ರಾಮೀಣ ಕೂಟ ಸಂಸ್ಥೆಯ ಗೋಣಿಕೊಪ್ಪ ವಲಯ ವ್ಯವಸ್ಥಾಪಕ ಪ್ರತಾಪ್ ತಿಳಿಸಿದರು. ಈ ಸಂದರ್ಭ ಶಾಲೆಯ ಆವರಣದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮೀಣ ಕೂಟ ಸಂಸ್ಥೆಯ ಸದಸ್ಯರುಗಳು ಗಿಡ ನೆಟ್ಟರು.