ಮಡಿಕೇರಿ, ಸೆ. ೨೮: ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ದಂಡ ಸಹಿತ ಒಟ್ಟು ೧೧ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಘೋಷಿಸಿದೆ.

ಕೆದಕಲ್ ಗ್ರಾಮದ ನೆಗದಾಳು ನಿವಾಸಿ ಶಿವಪ್ರಕಾಶ್ (ಶಶಿ) ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ.

ತಾ. ೮.೩.೨೦೨೨ ರಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ನಡೆಸಿದ

ಕುರಿತು

ಕೊಡಗು

ಮಹಿಳಾ

ಪೊಲೀಸ್

ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿ ಆರೋಪಿ ಯನ್ನು ಬಂಧಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿ ಮಹಿಳಾ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುಮಾದೇವ, ಪಿಎಸ್‌ಐ ಕೆ.ಬಿ. ಅಚ್ಚಮ್ಮ, ಪೇದೆಗಳಾದ ಕುಮಾರಿ, ಶ್ರೀನಿವಾಸ್ ತನಿಖೆ ಕೈಗೊಂಡು ಆರೋಪಿ ಶಿವಪ್ರಕಾಶ್ ವಿರುದ್ಧ ದೋಷಾರೋಪಣ ಪತ್ರವನ್ನು ತಾ. ೭.೫.೨೨ ರಂದು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ಶಿವಪ್ರಕಾಶ್‌ಗೆ

(ಮೊದಲ ಪುಟದಿಂದ) ಕಲಂ ೩೭೬(೨) (ಎಫ್) ಸೆಕ್ಷನ್‌ನಡಿ ೧೦ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ರೂ. ೨೦ ಸಾವಿರ ದಂಡ, ಕಲಂ ೩೫೪ (ಎ) (೧) ಸೆಕ್ಷನ್‌ನಡಿ ೧ ವರ್ಷ ಕಠಿಣ ಕಾರಾಗೃಹ ಶಿಕ್ಷೆ, ರೂ. ೨೦ ಸಾವಿರ ದಂಡ ವಿಧಿಸಿ, ನೊಂದ ಬಾಲಕಿಗೆ ರೂ. ೪ ಲಕ್ಷ ಪರಿಹಾರ ಒದಗಿಸುವಂತೆ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ತೀರ್ಪು ನೀಡಿದ್ದಾರೆ.

ಆರೋಪಿ ವಿರುದ್ಧ ಸರಕಾರಿ ಅಭಿಯೋಜಕರಾದ ರುದ್ರಪ್ರಸನ್ನ ವಾದ ಮಂಡಿಸಿದರು.