ಮಡಿಕೇರಿ, ಸೆ. ೨೮: ಈ ಬಾರಿ ದಸರಾ ಉತ್ಸವದಲ್ಲಿ ದಶಮಂಟಪ ಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬAಧಿಸಿದAತೆ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಲು ದಶಮಂಟಪ ಸಮಿತಿ ನಿರ್ಧಾರ ತೆಗೆದುಕೊಂಡಿದೆ.
ನಗರದ ಕೋಟೆ ಮಾರಿಯಮ್ಮ ಸಭಾ ಭವನದಲ್ಲಿ ಸಮಿತಿಯ ಅಧ್ಯಕ್ಷ ಜಿ.ಸಿ. ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಗದೀಶ್ ಅವರು ಈ ಬಾರಿ ಮಂಟಪಗಳಲ್ಲಿ ೧೨ ಸೌಂಡ್ ಬಾಕ್ಸ್ಗಳನ್ನು ಮಾತ್ರ ಅಳವಡಿಕೆ ಮಾಡುವ ಬಗ್ಗೆ ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಎಲ್ಲಾ ಮಂಟಪ ಸಮಿತಿಗಳು ಸಹಕಾರ ನೀಡಬೇಕೆಂದು ಕೋರಿದರು. ಇದಕ್ಕೆ ಎಲ್ಲಾ ಮಂಟಪ ಸಮಿತಿಗಳು ಒಪ್ಪಿಗೆ ಸೂಚಿಸಿದವು. ಮಂಪಟಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು. ಮಂಟಪಗಳಲ್ಲಿ ಲೇಸರ್ ಲೈಟ್ ಬಳಕೆ ಮಾಡದಂತೆಯೂ ನಿರ್ಣಯ ಕೈಗೊಳ್ಳಲಾಯಿತು. ಧ್ವನಿವರ್ಧಕ ಬಳಕೆ ಸೇರಿದಂತೆ ಮಂಟಪಗಳಿಗೆ ಬೇಕಿರುವ ಎಲ್ಲಾ ರೀತಿಯ ಅನುಮತಿಗಳನ್ನು ದಶಮಂಟಪ ಸಮಿತಿ ಮೂಲಕವೇ ಪಡೆದುಕೊಳ್ಳಲು ನಿರ್ಧರಿಸಲಾಯಿತು. ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ ಶಾಸಕರ ಪ್ರಯತ್ನದಿಂದ ದಸರಾ ಉತ್ಸವಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಬರಲಿದೆ ಎಂದು ಹೇಳಿದರು. ಸಮಿತಿಯ ವಕೀಲ ರಂಜಿತ್ ಮಾತನಾಡಿ, ಮಂಟಪಗಳಲ್ಲಿ ಅಸಂಬದ್ಧ ಹಾಡುಗಳನ್ನು ಬಳಸದಂತೆ ಸಲಹೆಯಿತ್ತರು. ಇದಕ್ಕೆ ಎಲ್ಲಾ ಸಮಿತಿಗಳು ಒಪ್ಪಿಗೆ ಸೂಚಿಸಿದವು. ದಶಮಂಟಪ ಸಮಿತಿಗೆ ಬೈಲಾ ರಚನೆ ಮಾಡುವಂತೆ ರಂಜಿತ್ ಅವರು ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಮಂಟಪ ಸಮಿತಿಗಳ ಪ್ರಮುಖರು ಬೈಲಾ ರಚನೆ ಪ್ರಕ್ರಿಯೆಗೆ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಚಾಲನೆ ನೀಡಬೇಕೆಂದರು.
ಸಭೆಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷ ಬಿ.ಎಂ. ರಾಜೇಶ್, ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೇಶ್, ಉಪಾಧ್ಯಕ್ಷ ದಿಶು ಪ್ರಭುರೈ, ಖಜಾಂಚಿ ಸದಾ ಮುದ್ದಪ್ಪ, ಕಾರ್ಯಾಧ್ಯಕ್ಷ ಜಗದೀಶ್, ಸಲಹೆಗಾರ ಪಿ.ಜಿ. ಮಂಜುನಾಥ್, ಕೋಟೆ ಮಾರಿಯಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಸೋಮಯ್ಯ, ಮತ್ತಿತರರಿದ್ದರು.