ಚೆಯ್ಯಂಡಾಣೆ,, ಸೆ. ೨೭: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯಲ್ಲಿ "ಅನುಪಮ ನಾಯಕ ಅನರ್ಘ್ಯ ಸಂದೇಶ" ಎಂಬ ಧ್ಯೇಯ ವಾಕ್ಯದಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಡೆಯಿತು.
ವೀರಾಜಪೇಟೆ ಪಂಜರಪೇಟೆಯಿAದ ಆರಂಭಗೊAಡ ಜಾಥಾವನ್ನು ಕೂರ್ಗ್ ಜಮಿಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಶಿಯಾಬುದ್ದೀನ್ ತಂಙಳ್ ಕಿಲ್ಲೂರ್ ದುಆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಜಾಥಾ ವೀರಾಜಪೇಟೆ ಪಟ್ಟಣದ ಪ್ರಮುಖ ಬೀದಿಗಳಾದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ ಹಾಗೂ ಮೀನುಪೇಟೆ ಮೂಲಕ ಸಂಚರಿಸಿ ಅನ್ವಾರ್ ಕ್ಯಾಂಪಸ್ನಲ್ಲಿ ಮುಕ್ತಾಯಗೊಂಡಿತು.
ಜಾಥಾದಲ್ಲಿ ದಫ್ ಪ್ರದರ್ಶನ, ಫ್ಲವರ್ ಶೋ, ಸ್ಕೌಟ್ಸ್, ನೋಡುಗರ ಗಮನ ಸೆಳೆಯಿತು.
ಶಾಂತಿಯ ಸಂದೇಶವನ್ನು ಸಾರುತ್ತಾ ವೀರಾಜಪೇಟೆ ಪಟ್ಟಣದ ವಿವಿಧ ರಸ್ತೆಯ ಬದಿಯಲ್ಲಿ ಜಾಥಾ ಸಂಚರಿಸಿತು.
ಜಾಥಾವು ವೀರಾಜಪೇಟೆಯ ಹೃದಯ ಭಾಗಕ್ಕೆ ತಲುಪಿದ ಸಂದರ್ಭ ಶಾಫಿ ಜುಮಾ ಮಸೀದಿ ಹಾಗೂ ಡೋನೇಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹೂ ಗುಚ್ಚ ನೀಡಿ ಅದ್ದೂರಿ ಸ್ವಾಗತ ಕೋರಲಾಯಿತು.
ಕೂರ್ಗ್ ಜಮಿಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಅನ್ವಾರ್ ಸಾರಥಿ ಅಶ್ರಫ್ ಅಹ್ಸನಿ ಮಾತನಾಡಿ, ವಿಶ್ವಕ್ಕೆ ಒಳ್ಳೆಯ ಸಂದೇಶವನ್ನು ಪ್ರವಾದಿ ಮಹಮ್ಮದ್ ಪೈಗಂಬರ್ ನೀಡಿದ್ದಾರೆ. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಸ್ವತ್ತು ಹೊಂದಿದ ತಂದೆ ತಾಯಿ ಮರಣ ಹೊಂದಿದರೆ ಅವರ ಸ್ವತ್ತುಗಳನ್ನು ಒಬ್ಬರು ಮಾತ್ರ ವಶಪಡಿಸಿಕೊಳ್ಳದೆ, ಗಂಡು, ಹೆಣ್ಣು ಮಕ್ಕಳಿಗು ಸಮಾನವಾಗಿ ದೊರೆಯುವಂತೆ ಮಾಡಿದ ಏಕೈಕ ವ್ಯಕ್ತಿತ್ವ ಮೊಹಮ್ಮದ್ ಪೈಗಂಬರ್ ಅವರದ್ದು ಎಂದರು.
ಪರಸ್ಪರ ಸ್ನೇಹ, ಸೌಹಾರ್ದತೆ, ಶಾಂತಿಯ ಸಂದೇಶಕ್ಕೆ ಇವರು ಸಾರಿದ ಮಾರ್ಗವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮೊಹಮ್ಮದ್ ಶರೀಫ್ ಅನ್ವಾರಿ ಮಾತನಾಡಿದರು. ಸಂಜೆ ಅಸ್ಮಾಉಲ್ ಹುಸ್ನಾ ರಾತೀಬ್ಗೆ ಸಯ್ಯದ್ ಉಬೈದ್ ತಂಙಳ್ ವಳಪಟ್ಟಣಂ ನೇತೃತ್ವ ವಹಿಸಿ ದುಆ ಆಶೀರ್ವಚನ ನೀಡಿದರು.
ಪ್ರಖ್ಯಾತ ವಾಗ್ಮಿ ಜಬ್ಬಾರ್ ಸಖಾಫಿ ಪಾತೂರ್ ಹುಬ್ಬುರಸೂಲ್ ಪ್ರಭಾಷಣ ನಡೆಸಿ ಮೊಹಮದ್ ಪೈಗಂಬರ್ (ಸ.ಅ) ರವರ ಆದರ್ಶ,ಶಾಂತಿಯ ನೆಲೆ,ಅವರ ಜೀವನ ಚರಿತ್ರೆಯ ಕುರಿತು ವಿವರಿಸಿದರು.
ಈ ಸಂದರ್ಭ ಕೂರ್ಗ್ ಜಮಿಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು, ಅಬ್ದುಲ್ ಅಝೀಝ್ ತಂಙಳ್, ಅನ್ವಾರ್ ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ, ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ, ಕೆಎಂಜೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ,ಎಸ್ ವೈಎಸ್ ಜಿಲ್ಲಾಧ್ಯಕ್ಷ ಹಮೀದ್ ಮುಸ್ಲಿಯಾರ್,ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಇಸ್ಮಾಯಿಲ್ ಸಖಾಫಿ, ಖಾತಿಮ್ ತಂಙಳ್, ಮಿಲಾದ್ ಜಾಥಾದ ಸ್ವಾಗತ ಸಮಿತಿಯ ಚೇರ್ಮನ್ ಖಾಲಿದ್ ಫೈಝಿ ಅಂಬಟ್ಟಿ, ಸಂಚಾಲಕ ಹಂಝ ಮದನಿ ಗುಹ್ಯ, ಎಸ್ಎಸ್ಎಫ್ ರಾಷ್ಟಿçÃಯ ಮಾಜಿ ಕಾರ್ಯದರ್ಶಿ ಯಾಕೂಬ್, ಎಸ್ಎಸ್ಎಫ್, ಎಸ್ವೈಎಸ್, ಕೆಎಂಜೆ, ಎಸ್ಜೆಎಂ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. -ಅಶ್ರಫ್