ಮಡಿಕೇರಿ: ಚೇರಂಬಾಣೆ ವೃತ್ತದ ೨೮ ಗ್ರಾಮಗಳಿಗೆ ಸೇರಿದ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಕೆ. ಬಾಡಗ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಸಾಚರಣೆ ಕಾರ್ಯಕ್ರಮವನ್ನು ಆಚರಿಸಿದರು.
ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮದಲ್ಲಿ ಆಹಾರ, ಆರೋಗ್ಯ, ಇಲಾಖೆ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು.ಮಡಿಕೇರಿ: ಬಾಡಗ-೧ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದಡಿ ಯಲ್ಲಿ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅರಿವು ಕಾರ್ಯಕ್ರಮವು ನೆರವೇರಿತು.ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಫಲಾನುಭವಿಗಳಿಗೆ ಇಲಾSಕಾರ್ಯಕ್ರಮದಲ್ಲಿ ಮೂರ್ನಾಡು ವೃತ್ತದ ಅಂಗನವಾಡಿ ಕಾರ್ಯ ಕರ್ತೆಯರು ಭಾಗವಹಿಸಿದ್ದರು. ಸಂಜೀವಿನಿ ಸಂಘದ ಸದಸ್ಯರು, ಶ್ರೀ ಶಕ್ತಿ ಗುಂಪಿನ ಸದಸ್ಯರು ಪಾಲ್ಗೊಂಡಿದ್ದರು.ೆಯ ಯೋಜನೆಯ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಕಣಿವೆ: ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಇರುವ ಅಂಗನ ವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಸೀಮಂತ, ಪೋಷಣ್ ಮಾಸಾಚರಣೆ ಹಾಗೂ ಆರೋಗ್ಯ ಮೇಳ ನಡೆಯಿತು.
ಈ ಸಂದರ್ಭ ಮುಖ್ಯ ಅತಿಥಿಯಾಗಿದ್ದ ಕುಶಾಲನಗರ ಪುರಸಭೆ ಸದಸ್ಯೆ ರೇಣುಕಾ ಜಗದೀಶ್ ಮಾತನಾಡಿ, ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಪೂರಕವಾಗಿವೆ.
ಗರ್ಭಿಣಿಯರು ಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕೆAದರು. ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತರು ಹಾಗೂ ವೈದ್ಯ ಸಿಬ್ಬಂದಿಗಳ ಸೇವೆ ಶ್ಲಾಘನೀಯವಾದುದು ಎಂದರು.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಿಕಾ ಮೂರ್ತಿ, ಸಮುದಾಯ ಆರೋಗ್ಯ ನಿರೀಕ್ಷಕಿ ದೀಪಾ, ತಾಲೂಕು ಪೋಷಣ ಅಭಿಯಾನದ ಸಂಯೋಜಕಿ ರಂಜಿತಾ, ಅಂಬೇಡ್ಕರ್ ಕಾಲೋನಿ ಅಂಗನವಾಡಿ ಕಾರ್ಯಕರ್ತೆ ಚಂದ್ರಿಕಾ, ಸಹಾಯಕಿ ಭಾಗ್ಯ, ಬೈಚನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಕವಿತಾ, ಆಶಾ ಕಾರ್ಯಕರ್ತರಾದ ಮೀನಾಕ್ಷಿ, ನಂದಿನಿ, ಹೆಚ್.ವಿ. ರೂಪ, ಲತಾ ಇದ್ದರು.ಕರಿಕೆ: ಕರಿಕೆ ಗ್ರಾಮ ಪಂಚಾಯಿತಿಗೊಳಪಟ್ಟ ಹನ್ನೆರಡು ಅಂಗನವಾಡಿ ವ್ಯಾಪ್ತಿಯ ಪೋಷಣ್ ಅಭಿಯಾನ ಕಾರ್ಯಕ್ರಮವು ಕೊಚ್ಚಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಲ್ಲವಿ, ಸ್ಥಳೀಯವಾಗಿ ಸಿಗುವ ಪೋಷಣಾಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಕಾಳು, ಸೊಪ್ಪು, ತರಕಾರಿಗಳನ್ನು ಬಳಕೆಮಾಡಬೇಕು. ಅಲ್ಲದೇ ಆಟ, ವ್ಯಾಯಾಮ, ನಿಗದಿತ ಸಮಯದಲ್ಲಿ ಮಾಡಬೇಕು. ಶುದ್ಧ ನೀರು, ಶುದ್ಧ ಆಹಾರ ಸೇವನೆಯಿಂದ ನಾವು ರೋಗ ಮುಕ್ತವಾಗಿ ಆರೋಗ್ಯವಾಗಿ ಜೀವನ ಸಾಗಿಸಲು ಸಾಧ್ಯವೆಂದು ತಿಳಿಹೇಳಿದರು
ಕಾರ್ಯಕ್ರಮದಲ್ಲಿ ಹನ್ನೆರಡು ಅಂಗನವಾಡಿಗಳ ಕಾರ್ಯ ಕರ್ತೆಯರು, ಆಶಾ ಕಾರ್ಯಕರ್ತೆಯರು, ಮಕ್ಕಳು ಪೋಷಕರು, ಬಾಲ ವಿಕಾಸ ಸಮಿತಿಯವರು, ಗರ್ಭಿಣಿಯರು, ಬಾಣಂತಿಯರು ಉಪಸ್ಥಿತರಿದ್ದರು.ಆರೋಗ್ಯವಾಗಿ ಜೀವನ ಸಾಗಿಸಲು ಸಾಧ್ಯವೆಂದು ತಿಳಿಹೇಳಿದರು
ಕಾರ್ಯಕ್ರಮದಲ್ಲಿ ಹನ್ನೆರಡು ಅಂಗನವಾಡಿಗಳ ಕಾರ್ಯ ಕರ್ತೆಯರು, ಆಶಾ ಕಾರ್ಯಕರ್ತೆಯರು, ಮಕ್ಕಳು ಪೋಷಕರು, ಬಾಲ ವಿಕಾಸ ಸಮಿತಿಯವರು, ಗರ್ಭಿಣಿಯರು, ಬಾಣಂತಿಯರು ಉಪಸ್ಥಿತರಿದ್ದರು.