ಮಡಿಕೇರಿ, ಸೆ. ೨೮: ಸಂಪಾಜೆ ನಾಡ ಕಚೇರಿಯಲ್ಲಿ ತಾ.೩೦ ರಂದು ಹೋಬಳಿ ಮಟ್ಟದ ಪಿಂಚಣಿ ದಿನ ಕಾರ್ಯಕ್ರಮ ನಡೆಯಲಿದೆ.

ಈ ದಿನದಂದು ಸಂಪಾಜೆ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಹಾಜರಾಗಿ ಹೊಸದಾಗಿ ಪಿಂಚಣಿ ಕೋರಿ ಅರ್ಜಿ ಸಲ್ಲಿಸುವುದು. ಪಿಂಚಣಿ ನಿಂತು ಹೋಗಿದಲ್ಲಿ ಅಗತ್ಯ ದಾಖಲೆಗಳೊಂದಿಗೆ ಮತ್ತೆ ಪಿಂಚಣಿ ಮರು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಸಂಪಾಜೆ ನಾಡಕಚೇರಿಯ ಉಪ ತಹಶೀಲ್ದಾರ್ ಬಿ.ಜಿ. ವೆಂಕಟೇಶ್ ಕೋರಿದ್ದಾರೆ.