ಮಡಿಕೇರಿ, ಸೆ. ೨೮: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಂಗೂರು ಐವತ್ತೊಕ್ಲು ವಾರ್ಡ್ ಸಭೆ ತಾ. ೩೦ ರಂದು ಪೂರ್ವಾಹ್ನ ಐವತ್ತೊಕ್ಲು ಅಂಗನವಾಡಿ ಕೇಂದ್ರದಲ್ಲಿ ಪಂಚಾಯಿತಿ ಸದಸ್ಯೆ ಶೀಲಾವತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಬಿ. ಬಾಡಗ ವಾರ್ಡ್ ಸಭೆ ತಾ. ೩೦ ರಂದು ಮಧ್ಯಾಹ್ನ ೨ ಗಂಟೆಗೆ ಬಿ. ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚಾಯಿತಿ ಸದಸ್ಯ ಕಿಶೋರ್ ಕುಮಾರ್ ಕೆ.ಬಿ. ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೊಳಗದಾಳು ವಾರ್ಡ್ ಸಭೆ ಅಕ್ಟೋಬರ್ ೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೊಳಗದಾಳು ಪ್ರಾಥಮಿಕ ಶಾಲೆಯಲ್ಲಿ ಕಿಶೋರ್ ಕುಮಾರ್ ಕೆ.ಬಿ. ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೊಟ್ಟೂರು ವಾರ್ಡ್ ಸಭೆ ಅಕ್ಟೋಬರ್ ೩ ರಂದು ಮಧ್ಯಾಹ್ನ ೨ ಗಂಟೆಗೆ ಅಯ್ಯಪ್ಪಕಾಡು ಸಮುದಾಯ ಭವನದಲ್ಲಿ ಪಂಚಾಯಿತಿ ಸದಸ್ಯ ಸೋಮಣ್ಣ ಬಿ.ಜೆ. ಅಧ್ಯಕ್ಷತೆಯಲ್ಲಿ ನಡೆಯಲಿದೆ.