ಮಡಿಕೇರಿ, ಸೆ. ೨೮: ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ನವರಾತ್ರಿ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಲಂಕಾರ ಸಮಿತಿಯ ಉಪಾಧ್ಯಕ್ಷ ರವಿಗೌಡ ಅ. ೩ ರಂದು ಕರಗ ಸಾಗುವ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಅ. ೧೧ ರಂದು ಆಯುಧ ಪೂಜೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ವಾಹನ ಅಲಂಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಲಾರಿ, ಬಸ್, ಕಾರ್, ಸೈಕಲ್, ಬೈಕ್, ಆಟೊ, ಟಾಟಾ ಏಸ್., ಜೀಪ್, ಪಿಕ್‌ಅಪ್, ಜೆ.ಸಿ.ಬಿ. ಹಾಗೂ ಇನ್ನಿತರ ವಾಹನಗಳ ಅಲಂಕಾರ ಸ್ಪರ್ಧೆ ಇರಲಿದೆ ಎಂದು ಹೇಳಿದರು.

ನಗರದ ವಿವಿಧ ಕಟ್ಟಡಗಳ ಅಲಂಕಾರ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ. ನವರಾತ್ರಿಯ ೯ ದಿನವೂ ಮಡಿಕೇರಿ ನಗರದ ೧೦ ದೇವಾಲಯಗಳು, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ವಿವಿಧ ಕಟ್ಟಡಗಳು, ಆಭರಣ ಮಳಿಗೆಗಳು, ಜವಳಿ ಅಂಗಡಿ, ಬೇಕರಿ, ಹೊಟೇಲ್, ಬ್ಯಾಂಕ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಟ್ಟಡಗಳ ಮಾಲೀಕರು ದೀಪಾಲಂಕಾರ ಮಾಡಬೇಕು. ಆಕರ್ಷಕವಾಗಿ ಅಲಂಕಾರ ಮಾಡಿದÀ ಕಟ್ಟಡಗಳಿಗೆ ಬಹುಮಾನವೂ ಇರಲಿದೆ ಎಂದು ತಿಳಿಸಿದರು.

ಈ ಬಾರಿಯೂ ನವರಾತ್ರಿಯ ಪ್ರಯುಕ್ತ ಮನೆಗಳಲ್ಲಿ ವಿವಿಧ ಬಗೆಯ ಗೊಂಬೆಗಳ ಜೋಡಣೆಯ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲೂ ಬಹುಮಾನಗಳಿವೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ೯೬೧೧೧೦೧೦೭೦, ೭೦೨೨೬೮೫೮೬೮ ಸಂಪರ್ಕಿಸಬಹುದೆAದರು. ಅಲಂಕಾರ ಸಮಿತಿಯ ಅಧ್ಯಕ್ಷ ಮುನೀರ್ ಮಾಚರ್, ಖಜಾಂಚಿ ರಫೀಕ್ ದಾದ, ಸಹ ಕಾರ್ಯದರ್ಶಿಗಳಾದ ಕೋಚನ. ಎಂ. ಚೇತನ್, ಪುನೀತ್ ಸುದ್ದಿಗೋಷ್ಠಿಯಲ್ಲಿದ್ದರು.