ಮಡಿಕೇರಿ, ಸೆ. ೨೭: ಹಾಕಿ ಇಂಡಿಯಾ ವತಿಯಿಂದ ಜಾರ್ಕಂಡ್‌ನ ರಾಂಚಿಯಲ್ಲಿ ಸೆ. ೩೦ರಿಂದ ಅಕ್ಟೋಬರ್ ೧೦ರ ತನಕ ನಡೆಯಲಿರುವ ಜೂನಿಯರ್ ಮಹಿಳಾ ಹಾಕಿ ಚಾಂಪಿಯನ್ ಶಿಪ್‌ನಲ್ಲಿ ಹಾಕಿ ಕರ್ನಾಟಕ ತಂಡ ಪಾಲ್ಗೊಳ್ಳಲಿದೆ. ರಾಜ್ಯ ತಂಡದಲ್ಲಿ ಕೊಡಗಿನ ಹಲವು ಆಟಗಾರರು ಸ್ಥಾನ ಪಡೆದಿದ್ದಾರೆ.

ರಾಜ್ಯ ತಂಡದ ನಾಯಕಿಯಾಗಿ ಯಮುನ ಎಸ್. ಆಯ್ಕೆಯಾಗಿದ್ದು, ತಂಡದಲ್ಲಿ ಕೊಡಗಿನ ೮ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಪುಳ್ಳಂಗಡ ನಿಧಿ ನೀಲಮ್ಮ, ರಕ್ಷಿತಾ ಜೆ., ಪಟ್ಟಮಾಡ ಶ್ರೀಷ್ಮ ಬೊಳ್ಳಮ್ಮ, ಮಾಳೇಟಿರ ದಿಶಾ ಪೊನ್ನಮ್ಮ, ಚಂದನಾ ಟಿ.ಸಿ., ನಿಸರ್ಗ ಎಸ್.ಬಿ., ಶ್ರಾವ್ಯ ಪಿ.ಡಿ., ಕುಂಡಚ್ಚಿರ ತೇಜ್ ಬೆಳ್ಳಿಯಪ್ಪ ತಂಡದಲ್ಲಿರುವ ಕೊಡಗಿನ ಆಟಗಾರ್ತಿಯರು. ರಾಜ್ಯದ ೧೭ ಆಟಗಾರರ ಪೈಕಿ ೮ ಮಂದಿ ಕೊಡಗಿನವರಾಗಿರುವುದು ವಿಶೇಷವಾಗಿದೆ.