ಮಡಿಕೇರಿ, ಸೆ. ೨೭: ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿದ್ದ ಎಂ.ಆರ್.ಐ. ಸೇವೆ ತಾ. ೨೯ ರಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದೊರೆಯಲಿದ್ದು, ಇದರಿಂದಾಗಿ ಕೊಡಗಿನ ಜನರು ದೂರದ ಊರುಗಳಿಗಾಗಿ ಅಲೆದಾಡುವುದು ತಪ್ಪಲಿದೆ.
ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಮಡಿಕೇರಿ ಬೋಧಕ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಜಿಲ್ಲೆಯ ಬಹುಬೇಡಿಕೆಯ ಎಂಆರ್ಐ ಸ್ಕಾ÷್ಯನಿಂಗ್ ಯಂತ್ರ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಈ ಸೇವೆಗೆ ಭಾನುವಾರ ಚಾಲನೆ ನೀಡಲಿದ್ದಾರೆ.
ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಮಡಿಕೇರಿ ಭೋದಕ ಆಸ್ಪತ್ರೆಯಲ್ಲಿ ಸಿಟಿ ಸ್ಕಾ÷್ಯನಿಂಗ್ ವ್ಯವಸ್ಥೆ ಕಾರ್ಯಾಚರಿಸುತ್ತಿದೆ. ಆದರೆ ಮತ್ತಷ್ಟು ನಿಖರ ಫಲಿತಾಂಶಕ್ಕೆ ಅಗತ್ಯವಾಗಿದ್ದ ಎಂಆರ್ಐ ಸ್ಕಾ÷್ಯನಿಂಗ್ ವ್ಯವಸ್ಥೆ ಕೊಡಗಿನಲ್ಲಿ ಇರಲಿಲ್ಲ. ಎಂಆರ್ಐ ಸ್ಕಾö್ಯನಿಂಗ್ ಮಾಡಿಸಬೇಕಾದರೆ ಪಕ್ಕದ ಸುಳ್ಯ, ಮಂಗಳೂರು ಅಥವಾ ಮೈಸೂರು, ಬೆಂಗಳೂರಿಗೆ ತೆರಳಬೇಕಾಗಿತ್ತು.
ಸ್ವತಃ ವೈದ್ಯರಾಗಿರುವ ಮಡಿಕೇರಿ ಶಾಸಕ ಡಾ. ಮಂತರ್ಗೌಡ ಅವರು ಶಾಸಕರಾಗಿ ಆಯ್ಕೆ ಆದ ನಂತರ ಎಂಆರ್ಐ ಸ್ಕಾö್ಯನಿಂಗ್ ಘಟಕ ಇಲ್ಲದಿರುವುದು ಮನಗಂಡು ಸರ್ಕಾರದೊಂದಿಗೆ ವ್ಯವಹರಿಸಿ ಜಿಲ್ಲೆಗೆ ಎಂಆರ್ಐ ಸ್ಕಾ÷್ಯನಿಂಗ್ ಯಂತ್ರ ಮಂಜೂರು ಮಾಡಿಸಿದ್ದಾರೆÀ. ಈ ಬೆನ್ನಲ್ಲೇ ಸಂಬAಧಿಸಿದ ಯಂತ್ರಗಳು ಅಳವಡಿಕೆಯಾಗಿ ಎಂಆರ್ಐ ಸೇವೆಗೆ ಸಿದ್ಧವಾಗಿದೆ.
ಎಂಆರ್ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರ ಸಂಪೂರ್ಣ ಕಾಂತೀಯ ಶಕ್ತಿಯಿಂದ ಕಾರ್ಯನಿರ್ವಹಿಸುವುದರಿಂದ ಇದಕ್ಕೆ ದಿನದ ೨೪ ಗಂಟೆಯೂ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿರಬೇಕಿದೆ. ಒಮ್ಮೆ ವಿದ್ಯುತ್ ಸಂಪರ್ಕ ಕಡಿತವಾದರೂ ಯಂತ್ರ ಕೆಟ್ಟುಹೋಗುವ ಸಾಧ್ಯತೆಯಿದೆ. ಹೀಗಾಗಿ ಈ ಯಂತ್ರಕ್ಕಾಗಿ ಪ್ರತ್ಯೇಕ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಟ್ರಾನ್ಸ್ಫಾರ್ಮರ್, ಜನರೇಟರ್, ಪವರ್ ಬ್ಯಾಕಪ್
(ಮೊದಲ ಪುಟದಿಂದ) ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆಸ್ಪತ್ರೆಯಲ್ಲಿ ಇಬ್ಬರು ರೇಡಿಯಾಲಜಿ ತಜ್ಞರಿದ್ದು, ಅವರು ತುರ್ತಾಗಿ ಬೇಕಾಗಿರುವ ಸ್ಕಾ÷್ಯನಿಂಗ್ ರಿಪೋರ್ಟ್ಗಳನ್ನು ತಕ್ಷಣ ಸ್ಥಳದಲ್ಲಿಯೇ ನೀಡುತ್ತಾರೆ. ಉಳಿದಂತೆ ಸ್ಕಾ÷್ಯನಿಂಗ್ ಆದ ಕೆಲ ಗಂಟೆಗಳಲ್ಲಿ ಆನ್ಲೈನ್ ಮೂಲಕ ವೈದ್ಯರು ರಿಪೋರ್ಟ್ ನೀಡಲಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ರೂ. ೧೦.೭೦ ಕೋಟಿ ವೆಚ್ಚದಲ್ಲಿ ಎಂಆರ್ಐ ಸ್ಕಾ÷್ಯನಿಂಗ್ ಯಂತ್ರ ಅಳವಡಿಕೆ ಕೆಲಸ ಆಗಿದೆ. ಸಿಟಿ ಸ್ಕಾ÷್ಯನಿಂಗ್ನAತೆಯೇ ಇಲ್ಲಿಯೂ ಆನ್ಲೈನ್ ಮೂಲಕ ವರದಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಕೀಲುಗಳು ಮತ್ತು ಮೂಳೆಗಳಿಗೆ ಸಂಬAಧಿಸಿದ ರೋಗಗಳನ್ನು ಪತ್ತೆಹಚ್ಚಲು, ಹೃದಯ ಸಂಬAಧಿ ಕಾಯಿಲೆಗಳನ್ನು ಗುರುತಿಸಲು, ಸ್ತನ ಕ್ಯಾನ್ಸರ್ ಅಪಾಯವನ್ನು ಕಂಡುಹಿಡಿಯಲು, ಬೆನ್ನುಹುರಿ ಮತ್ತು ಮೆದುಳಿನ ಸಮಸ್ಯೆಗಳನ್ನು ಪತ್ತೆಹಚ್ಚಲು, ಗರ್ಭಧಾರಣೆ ಮತ್ತು ಯಕೃತ್ತಿನ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು, ಬಂಜೆತನಕ್ಕೆ ಚಿಕಿತ್ಸೆ ಪಡೆಯುವ ಮಹಿಳೆಯರಲ್ಲಿ ಗರ್ಭಾಶಯದ ಅಸಹಜತೆಗಳನ್ನು ಪತ್ತೆಹಚ್ಚಲು, ಎಂಡೊಮೆಟ್ರಿಯೊಸಿಸ್ ಮತ್ತು ಫೈಬ್ರಾಯ್ಡ್ಗಳನ್ನು ಒಳಗೊಂಡಿರುವ ಮಹಿಳೆಯರಲ್ಲಿ ಶ್ರೋಣಿಯ ನೋವಿನ ಕಾರಣಗಳನ್ನು ಮೌಲ್ಯಮಾಪನ ಮಾಡಲು, ದೇಹದ ವಿವಿಧ ಭಾಗಗಳಲ್ಲಿ ಹುಣ್ಣುಗಳು, ಗೆಡ್ಡೆಗಳು ಅಥವಾ ಇತರ ಕಾಯಿಲೆಗಳನ್ನು ಪತ್ತೆಹಚ್ಚಲು ಎಂಆರ್ಐ ಸ್ಕಾ÷್ಯನಿಂಗ್ ಬಳಸಲಾಗುತ್ತದೆ.