*ಗೋಣಿಕೊಪ್ಪ, ಸೆ. ೨೮: ಗೊಣಿಕೊಪ್ಪಲು ಕಾಫಿ ಮಂಡಳಿ, ನಿಟ್ಟೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮ ಮಟ್ಟದ ಕಾಫಿ ಕಾರ್ಯಾಗಾರ ನಡೆಸಲಾಯಿತು. ನಿಟ್ಟೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಕಾರ್ಯಕ್ರಮಕ್ಕೆ ಗ್ರಾ.ಪಂ. ಅಧ್ಯಕ್ಷೆ ಅಮ್ಮುಣಿ, ಚಾಲನೆ ನೀಡಿದರು.

ಕಾಫಿ ಮಂಡಳಿಯ ಉಪ ನಿರ್ದೇಶಕಿ ಡಾ. ಶ್ರೀದೇವಿ ಮಾತನಾಡಿ, ಹೆಚ್ಚಿನ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆರೋಗ ನಿರ್ವಹಣೆ ಮತ್ತು ಕಾಫಿ ಉದುರುವುದರ ಬಗ್ಗೆ, ಮರು ನಾಟಿ, ಗೋಡೌನ್, ಕಾಫಿ ಕಣ, ಹೊಸ ಕೆರೆ, ಬಾವಿ, ಸ್ಪಿçಂಕ್ಲರ್ ಉಪಕರಣ, ಮೋಟಾರ್, ಮಿನಿ ಟ್ರ‍್ಯಾಕ್ಟರ್ ಮುಂತಾದವುಗಳಿಗೆ ಸಬ್ಸಿಡಿಯನ್ನು ಕಾಫಿ ಮಂಡಳಿಯಿAದ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಗೋಣಿಕೊಪ್ಪಲು ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಮುಖಾರೀಬ್, ನಿಟ್ಟೂರು ಗ್ರಾ.ಪಂ. ಉಪಾಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ಸದಸ್ಯರು ಗಳಾದ ಕಾಟಿಮಾಡ ಶರೀನ್ ಮುತ್ತಣ್ಣ, ಪಡಿಞರಂಡ ಕವಿತಾ ಪ್ರಭು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುರೇಶ್, ಪ್ರಮುಖರುಗಳಾದ ಪಾರುವಂಗಡ ಪವನ್, ಮುಕ್ಕಾಟಿರ ಪ್ರಿನ್ಸ್ ಇದ್ದರು.