ಕೂಡಿಗೆ, ಸೆ. ೨೮: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ಮೈಸೂರು ವಿಭಾಗಮಟ್ಟದ ದಸರಾ ಕ್ರೀಡಾಕೂಟ ನಡೆಯಿತು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿ ಕ್ರೀಡೆ ಮೂಲಕ ಬದುಕಿನ ಆದರ್ಶ ಮತ್ತು ಜೀವನದ ಮೌಲ್ಯಗಳನ್ನು ಕಲಿಯಬಹುದಾಗಿದೆ. ಕ್ರೀಡಾಕೂಟ ರಾಜರ ಕಾಲದಿಂದ ಉತ್ತೇಜನ ದೊರೆಯುತ್ತಿದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವಿಕೆಗೆ ಅನುಕೂಲವಾಗುವುದರಿಂದ ಕ್ರೀಡಾಪಟುಗಳು ರಾಜ್ಯ, ರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಲು ಸಹಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಭಾಗವಹಿಸಿದರು. ಪ್ರಾಸ್ತಾವಿಕವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯ ಚಕ್ರವರ್ತಿ ಮಾತನಾಡಿದರು.

ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ.ಹಮೀದ್, ಕಾಲೇಜು ಉಪಾಧ್ಯಕ್ಷ ಸೋಮಶೇಖರ್, ಕ್ರೀಡಾ ಶಾಲೆಯ ಮುಖ್ಯಶಿಕ್ಷಕ ದೇವ್‌ಕುಮಾರ್, ರಾಷ್ಟಿçÃಯ ಹಾಕಿ ಕ್ರೀಡಾಪಟು ಶಸತ್ ಗೌಡ, ಹಾಕಿ ತರಬೇತಿದಾರರಾದ ವೆಂಕಟೇಶ, ದೀನಾಮಣಿ, ಬಿಂದು, ಮಂಜುನಾಥ, ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮೈಸೂರು ವಿಭಾಗದ ದಸರಾ ಕ್ರೀಡಾಕೂಟದಲ್ಲಿ ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಉಡುಪಿ, ಮಂಡ್ಯ, ಮಂಗಳೂರು ಸೇರಿದಂತೆ ೮ ಜಿಲ್ಲೆಯವರು ಭಾಗವಹಿಸಿದರು. ಹಾಕಿ, ಯೋಗ, ಜಿಮ್ನಾಸ್ಟಿಕ್ ಪಂದ್ಯಗಳು ನಡೆದವು.