ಬೆಂಗಳೂರು, ಸೆ. ೨೬: ಪಶ್ಚಿಮ ಘಟ್ಟಗಳ ಸಂರಕ್ಷಣೆ ಸಂಬAಧ ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ತಂಡ ನೀಡಿರುವ ವರದಿಯಡಿ ಕೇಂದ್ರ ಸರಕಾರ ಹೊರಡಿಸಿದ್ದ ೬ನೇ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ತಿರಸ್ಕಾರ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾತನಾಡಿದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್.ಕೆ. ಪಾಟೀಲ ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ನೀಡಿರುವ ವರದಿಯನ್ನು ಆದರಿಸಿ ಪಶ್ಚಿಮಘಟ್ಟ ಪರಿಸರ ಸೂಕ್ಷö್ಮ ಪ್ರದೇಶಗಳನ್ನು ಘೋಷಿಸುವ ಸಂಬAಧ ಕೇಂದ್ರ ಸರಕಾರ ಜು. ೩೧ ರಂದು ಹೊರಡಿಸಿರುವ ಕರಡು ಅಧಿಸೂಚನೆಗೆ ಕರ್ನಾಟಕ ಸರಕಾರದ ಅಭಿಪ್ರಾಯ ಕೇಳಿತ್ತು. ಸಚಿವ ಸಂಪುಟ ಸವಿಸ್ತಾರ ಚರ್ಚೆ ಮಾಡಿ. ಈಗಾಗಲೇ ಚರ್ಚೆ ಆಗಿರುವಂತೆ ಅಧಿಸೂಚನೆ ತಿರಸ್ಕಾರಕ್ಕೆ ನಿರ್ಣಯ ಕೈಗೊಂಡಿದೆ ಎಂದರು.
ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪ್ರದೇಶವನ್ನು ನಿಗದಿಗೊಳಿಸಿದೆ. ಕೇಂದ್ರ ಸರಕಾರವು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷö್ಮ ಪ್ರದೇಶವೆಂದು ಘೋಷಿಸಲು ಜುಲೈನಲ್ಲಿ ೬ನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಮತ್ತು ಸಲಹೆಗಳಿದ್ದಲ್ಲಿ ೬೦ ದಿನದೊಳಗೆ ಸಲ್ಲಿಸಲು ತಿಳಿಸಿತ್ತು. ವರದಿ ಅನ್ವಯ ಸೂಕ್ಷö್ಮ ಪ್ರದೇಶವಾಗಿ ೨೦,೬೬೮ ಚ.ಕಿ.ಮೀ. ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷö್ಮ ಪ್ರದೇಶವು ೧೯,೨೫೨.೭೦ ಚ.ಕಿ.ಮೀ. ಆಗುತ್ತದೆ. ವಿವಿಧ ಕಾನೂನುಗಳ ಅಡಿಯಲ್ಲಿ ಈಗಾಗಲೇ ೧೬,೦೩೬.೭೨ ಚ.ಕಿ.ಮೀ. ಪ್ರದೇಶ ಸಂರಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಕೇಂದ್ರದ ಅಂಗಳಕ್ಕೆ ಚೆಂಡು - ಪೊನ್ನಣ್ಣ
ಕಸ್ತೂರಿ ರಂಗನ್ ವರದಿ ಜಾರಿಯಿಂದ ಜನರಿಗೆ, ರೈತರಿಗೆ ದೊಡ್ಡ ಮಟ್ಟದ ತೊಂದರೆಯಾಗುವುದನ್ನು ಮನಗಂಡು ಸರಕಾರ ಕರಡು ಅಧಿಸೂಚನೆಯನ್ನು ತಿರಸ್ಕಾರ ಮಾಡಿದ್ದು, ಇದೀಗ ಕೇಂದ್ರದ ಅಂಗಳಕ್ಕೆ ಚೆಂಡು ಹೋಗಿದೆ. ರಾಜ್ಯ ಸರಕಾರದ ಆಕ್ಷೇಪಣೆಯನ್ನು ಪರಿಗಣಿಸಿ ಕೇಂದ್ರ ಮುಂದಿನ ನಿರ್ಣಯ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.
ಹಿಂದೆ ಅರಣ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಜನರ ಆತಂಕ ದೂರ ಮಾಡುವಂತೆ ಒತ್ತಾಯಿಸಿದ್ದೆ. ಬಾಧಿತ ಪ್ರದೇಶದ ಜನಪ್ರತಿನಿಧಿಗಳು ಒಕ್ಕೊರಲ ವಿರೋಧ ವ್ಯಕ್ತಪಡಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ಅಧಿಸೂಚನೆಯನ್ನು ತಿರಸ್ಕಾರ ಮಾಡಲಾಗಿದೆ. ವರದಿಯಲ್ಲಿ ಅವೈಜ್ಞಾನಿಕ ಅಂಶವಿದ್ದು, ಪರಿಣಾಮ ನಿರ್ಬಂಧಗಳಿAದ ಬದುಕು ನಡೆಸುವುದು ಕಷ್ಟದಾಯಕವಾಗುತ್ತದೆ. ವೈಜ್ಞಾನಿಕ ಸಲಹೆಗಳನ್ನು ಅಳವಡಿಸಿ ಕೊಳ್ಳಬೇಕಾಗಿದೆ. ರಾಜ್ಯದಲ್ಲಿ ವಿವಿಧ ಕಾಯಿದೆ, ಕಾನೂನುಗಳ ಮೂಲಕ ಅಪಾರ ಅರಣ್ಯ ಪ್ರದೇಶ ಉಳಿಸಲಾಗಿದೆ. ಸೂಕ್ಷö್ಮ ಪ್ರದೇಶದಲ್ಲಿ ನಿರ್ಬಂಧಗಳನ್ನು ಒಪ್ಪಲಾಗುವುದಿಲ್ಲ ಎಂದರು.
ರೈತ-ಜನಪರ ನಿಲುವು : ಮಂತರ್
ಕೊಡಗು ಸೇರಿದಂತೆ ಮಲೆನಾಡು ಭಾಗದ ಜನರನ್ನು ಕಾಡುತ್ತಿದ್ದ ಕಸ್ತೂರಿ ರಂಗನ್ ವರದಿ ಪ್ರಸ್ತಾಪವನ್ನು ತಿರಸ್ಕಾರ ಮಾಡುವ ಮೂಲಕ ರಾಜ್ಯ ಸರಕಾರ ರೈತ ಹಾಗೂ ಜನಪರ ನಿಲುವನ್ನು ತಾಳಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.
ನಮ್ಮ ಜಿಲ್ಲೆಯ ರೈತರು ಪರಿಸರವನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಈ ವರದಿಯಿಂದ ಜನರ ಬದುಕಿಗೆ ಪೆಟ್ಟು ಬೀಳುತ್ತದೆ ಎಂದು ಹಿಂದೆ ನಡೆದ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದೆ. ಕೊಡಗಿನ ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ಸಂಬAಧಪಟ್ಟವರ ಗಮನಕ್ಕೆ ತಂದಿದ್ದೆ. ಇದೀಗ ಕರಡು ಅಧಿಸೂಚನೆಯನ್ನು ತಿರಸ್ಕಾರ ಮಾಡುವ ಮೂಲಕ ರಾಜ್ಯ ಸರಕಾರ ವಿರೋಧವನ್ನು ತೋರಿದೆ. ಪರಿಸರ ಸೂಕ್ಷö್ಮ ಪ್ರದೇಶದ ಮಾರ್ಗಸೂಚಿಯಲ್ಲಿರುವ ‘ಬಫರ್ ಝೋನ್’ ಪ್ರಮಾಣವನ್ನು ಶೂನ್ಯದಲ್ಲಿಡಬೇಕು ಎಂದಿದ್ದಾರೆ.
ವರದಿಯಿಂದ ಬದುಕು ಬುಡಮೇಲು - ಸುಜಾ ಕುಶಾಲಪ್ಪ
ಕಸ್ತೂರಿ ರಂಗನ್ ವರದಿ ಜಾರಿಯಿಂದ ಕೊಡಗು, ಮಲೆನಾಡು ಭಾಗದ ಜನರ ಬದುಕು ಬುಡಮೇಲಾಗುತ್ತದೆ. ರಾಜ್ಯ ಸರಕಾರ ತಿರಸ್ಕಾರ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾನು ಪಾಲ್ಗೊಂಡು ವರದಿ ತಿರಸ್ಕಾರ ಮಾಡುವಂತೆ ಒತ್ತಾಯಿಸಿದ್ದೆ. ಈ ವರದಿಯಿಂದ ಜಿಲ್ಲೆಯಲ್ಲಿ ಜೀವನ ನಡೆಸಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಅರಣ್ಯ ಪ್ರದೇಶವಿದೆ. ಭೌತಿಕ ಸರ್ವೆ ಮಾಡಿದರೆ ನಿಗದಿಗಿಂತ ಹೆಚ್ಚಿನ ಅರಣ್ಯ ಪ್ರದೇಶ ಜಿಲ್ಲೆಯಲ್ಲಿರುತ್ತದೆ ಎಂದು ಹೇಳಿದರು.
(ಮೊದಲ ಪುಟದಿಂದ)
ತಿರಸ್ಕಾರ ಸ್ವಾಗತಾರ್ಹ - ಅಪ್ಪಚ್ಚು ರಂಜನ್
ಈ ಹಿಂದೆ ಬಿಜೆಪಿ ಸರಕಾರದವಿದ್ದ ಸಂದರ್ಭವೂ ಕಸ್ತೂರಿ ರಂಗನ್ ವರದಿಯನ್ನು ವಿಧಾನಸಭೆಯಲ್ಲಿ ತಿರಸ್ಕಾರ ಮಾಡಲಾಗಿತ್ತು. ಈ ಹಿನ್ನೆಲೆ ೬ನೇ ಕರಡು ಅಧಿಸೂಚನೆಯನ್ನು ಕೇಂದ್ರ ಸರಕಾರ ಹೊರಡಿಸಿತ್ತು. ರಾಜ್ಯ ಸರಕಾರದ ಸಚಿವ ಸಂಪುಟ ಅಧಿಸೂಚನೆಯನ್ನು ತಿರಸ್ಕಾರ ಮಾಡಿರುವುದು ಸ್ವಾಗತಾರ್ಹ ಎಂದು ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಪರಿಸರ ಉಳಿಸುವ ಕೆಲಸಕ್ಕೆ ನಮ್ಮ ವಿರೋಧವಿಲ್ಲ. ನೈಸರ್ಗಿಕ ಅರಣ್ಯ ಪ್ರದೇಶವನ್ನು ಉಳಿಸುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಸಾಂಪ್ರದಾಯಿಕ ಅರಣ್ಯವನ್ನು ಇದಕ್ಕೆ ಸೇರಿಸಿ ಸಾಮಾನ್ಯ ಜನರು, ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈ ಹಾಕಬಾರದು. ಇದರೊಂದಿಗೆ ಸಿ & ಡಿ ಲ್ಯಾಂಡ್ ಅನ್ನು ಅರಣ್ಯವಾಗಿ ಪರಿವರ್ತಿಸಬಾರದು ಎಂದು ಒತ್ತಾಯಿಸಿದ್ದಾರೆ.
ಪೂರ್ಣ ತಿರಸ್ಕಾರ ಅಸಾಧ್ಯ - ಕೆ.ಜಿ.ಬಿ.
ನ್ಯಾಯಾಲಯದ ಆದೇಶ ಇರುವ ಕಾರಣದಿಂದಾಗಿ ಕಸ್ತೂರಿ ರಂಗನ್ ವರದಿಯನ್ನು ಪೂರ್ಣವಾಗಿ ತಿರಸ್ಕರಿಸುವುದು ತಾಂತ್ರಿಕ ಹಾಗೂ ನ್ಯಾಯಾಂಗವಾಗಿ ಅಸಾಧ್ಯ. ಬದಲಾಗಿ ರಾಜ್ಯ ಸರಕಾರ ತನ್ನ ಪ್ರಬಲ ಆಕ್ಷೇಪಣೆ, ಸ್ಪಷ್ಟ ನಿಲುವನ್ನು ಕೇಂದ್ರಕ್ಕೆ ತಿಳಿಸಬೇಕೆಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ವ್ಯಾಖ್ಯಾನಿಸಿದ್ದಾರೆ.
ಸಭೆಗಳಲ್ಲಿ ಅಧಿಸೂಚನೆಯನ್ನು ತಿರಸ್ಕಾರ ಮಾಡುವುದರೊಂದಿಗೆ ತನ್ನ ಸ್ಪಷ್ಟ ನಿಲುವು, ವರದಿಯಿಂದಾಗುವ ವಾಸ್ತವ ಸಮಸ್ಯೆಗಳನ್ನು ಅಧ್ಯಯನ ನಡೆಸಿ ತಿಳಿಸುವ ಕೆಲಸ ಸರಕಾರದಿಂದಾಗಬೇಕು. ಇದಕ್ಕಾಗಿ ಸಮೀಕ್ಷೆಯ ಅಗತ್ಯವಿದೆ. ಸಾರಾಸಗಟಾಗಿ ತಿರಸ್ಕಾರ ಮಾಡುವುದು ಸರಿಯಲ್ಲ. ಕೇರಳ ರಾಜ್ಯದಲ್ಲಿ ೧೯ ಸಾವಿರ ಚ.ಕಿ.ಮೀ. ವ್ಯಾಪ್ತಿಯನ್ನು ೯ ಸಾವಿರ ಚ.ಕಿ.ಮೀ.ಗೆ ಇಳಿಸಲಾಗಿದೆ. ಈ ರೀತಿಯ ಕೆಲಸ ರಾಜ್ಯದಲ್ಲೂ ಆಗಬೇಕು ಎಂದು ಪ್ರತಿಪಾದಿಸಿದ್ದಾರೆ.
ವರದಿ ಜಾರಿಗೆ ವಿರೋಧ - ಧರ್ಮಜ ಉತ್ತಪ್ಪ
ಕಸ್ತೂರಿ ರಂಗನ್ ವರದಿ ಜಾರಿಗೆ ಮೊದಲಿನಿಂದಲೇ ವಿರೋಧವಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ. ಈ ಸಭೆಯಲ್ಲಿ ಬಾಧಿತ ಪ್ರದೇಶದ ಶಾಸಕರು, ಮಾಜಿ ಶಾಸಕರು ಪಾಲ್ಗೊಂಡು ಒಕ್ಕೊರಲ ವಿರೋಧ ವ್ಯಕ್ತಪಡಿಸಿ ತಿರಸ್ಕಾರಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಅನುಗುಣವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಸೂಚನೆ ವಿರೋಧಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಸಂಚಾಲಕ ತೀತಿರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.