ವೀರಾಜಪೇಟೆ, ಸೆ. ೨೬: ವೀರಾಜಪೇಟೆ ಬೇಟೋಳಿ ಗ್ರಾಮ ನಿವಾಸಿ, ಮಹಿಳಾ ಸಮಾಜದ ಪಕ್ಕದಲ್ಲಿ ನೆಲೆಸಿದ್ದ ಶಿಕ್ಷಕಿ ಪೆಟ್ಸಿನಾ ಮೆನೆಜಸ್ ಅವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೆಟ್ಸಿನಾ ಮೆನೆಜಸ್ ಹಾಗೂ ಅವರ ಪತಿ ಸಬಾಸ್ಟಿನ್ (ಕಫೀರ್) ಬುಧವಾರದಂದು ಮೈಸೂರಿನಲ್ಲಿ ತಮ್ಮ ಪುತ್ರನನ್ನು ಕಾಲೇಜಿಗೆ ದಾಖಲಿಸಿ ವೀರಾಜಪೇಟೆಗೆ ಹಿಂದಿರುಗುತ್ತಿದ್ದ ವೇಳೆ ಹುಣಸೂರಿನ ಬನ್ನಿಕುಪ್ಪೆ ಬಳಿ ತಾವು ಚಲಿಸುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಬೊಲೇರೋ ಜೀಪ್ ನಡುವೆ ಅಪಘಾತ ಉಂಟಾಗಿ ಕಾರಿನಲ್ಲಿದ್ದ ಪೆಟ್ಸಿನಾ ಅವರು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಪೆಟ್ಟು ಉಂಟಾದ್ದರಿAದ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಇವರು ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪತಿ ಹಾಗೂ ಈರ್ವರು ಮಕ್ಕಳನ್ನು ಅಗಲಿದ್ದಾರೆ.