ಮಡಿಕೇರಿ, ಸೆ. ೨೬: ಮಡಿಕೇರಿ ಲಯನ್ಸ್ ಸಂಸ್ಥೆಗೆ ಲಯನ್ಸ್ ವಲಯ ೨ ರ ಅಧ್ಯಕ್ಷ ಕನ್ನಂಡ ಬೊಳ್ಳಪ್ಪ ಅವರು ಭೇಟಿ ನೀಡಿ ಸೇವೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಮತ್ತು ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಬೇಕೆಂದು ಹೇಳಿದರು. ಈ ಸಂದರ್ಭ ನಿವೃತ್ತ ಶಿಕ್ಷಕ ರಾಮಚಂದ್ರ ಕೆ.ಎ. ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿ ಮಾತನಾಡಿದ ಶಿಕ್ಷಕರು ಲಯನ್ಸ್ ಸಂಸ್ಥೆ ಸಮಾಜ ಸೇವೆಯ ಜೊತೆಗೆ ಶಿಕ್ಷಕರ ಸೇವೆಯನ್ನು ಗುರುತಿಸಿ ಸನ್ಮಾನಿಸುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಟರಾಜು ಕೆಸ್ತೂರು ವಹಿಸಿದ್ದರು. ಇದೆ ಸಂದರ್ಭ ಲಯನ್ಸ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸು ವವರನ್ನು ಗುರುತಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಾಂತಿಯ ರಾಯಭಾರಿ ಮೋಹನ್ ದಾಸ್ ಬಿ.ವಿ., ವಲಯದ ಪ್ರಥಮ ಮಹಿಳೆ ಕವಿತಾ ಬೊಳ್ಳಪ್ಪ, ಮಾಜಿ ಅಧ್ಯಕ್ಷ ಮಧುಕರ್ ಶೇಟ್, ಕೋಶಾಧಿಕಾರಿ ಸೋಮಣ್ಣ ಪಿ.ಪಿ. ಇದ್ದರು. ಪ್ರತಿಭಾ ಶೇಟ್ ಪ್ರಾರ್ಥನೆ, ಧ್ಯಜ ವಂದನೆ ಆಗಸ್ಟ್ಯಿನ್ ಜಯರಾಜ್, ನೀತಿ ಸಂಹಿತೆ ರಾಗ ಪ್ರಕೃತಿ, ಅತಿಥಿ ಪರಿಚಯ ದಾಮೋದರ್ ಕೆ.ಕೆ., ರಂಜು ಕೆಂಜನ ಹಾಗೂ ವಂದನಾರ್ಪಣೆ ಕಾರ್ಯದರ್ಶಿ ಮದನ್ ಮಾದಯ್ಯ ನಿರ್ವಹಿಸಿದರು.