ಹೇಮಂತ್ ಕುಮಾರ್

ಕೂಡಿಗೆ, ಸೆ. ೨೬: ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ಸಂಘವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹಾಸನ ಹಾಲು ಒಕ್ಕೂಟ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಘದ ಅಭಿವೃದ್ಧಿಗೆ ಪೂರಕವಾದ ಯೋಜನೆ ಯನ್ನು ಆಡಳಿತ ಮಂಡಳಿಯಿAದ ಕೈಗೊಳ್ಳಲಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಎಸ್. ಮೋಹನ್ ವಹಿಸಿz್ದÀರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಪಶುಪಾಲನೆ ಮತ್ತು ಯೋಜನೆಯ ಸವಿಸ್ತಾರವಾದ ಮಾಹಿತಿಯನ್ನು ರೈತರಿಗೆ ಒದಗಿಸಿದರು.

ಈ ಸಂದರ್ಭ ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್, ನಿರ್ದೇಶಕ ರುಗಳಾದ ಪ್ರಕಾಶ್, ವಿಜಯಕುಮಾರ್, ಗಂಗಾಧರ್, ಚಿಕ್ಕಪ್ಪ, ಮನುಕುಮಾರ್, ವಿಷಕಂಠ, ಸುರೇಶ್, ಗಣೇಶ್, ಕುಮಾರ್, ಪಾರ್ವತಿ, ಹೇಮಾ, ಚಂದ್ರಿಕಾ, ಅಭಿಲಾಷ್, ರೇಖಾ, ಸಿಬ್ಬಂದಿ ವರ್ಗದವರು, ಸಂಘದ ಸದಸ್ಯರು ಹಾಜರಿದ್ದರು.ಬಸವರಾಜ್, ನಿರ್ದೇಶಕ ರುಗಳಾದ ಪ್ರಕಾಶ್, ವಿಜಯಕುಮಾರ್, ಗಂಗಾಧರ್, ಚಿಕ್ಕಪ್ಪ, ಮನುಕುಮಾರ್, ವಿಷಕಂಠ, ಸುರೇಶ್, ಗಣೇಶ್, ಕುಮಾರ್, ಪಾರ್ವತಿ, ಹೇಮಾ, ಚಂದ್ರಿಕಾ, ಅಭಿಲಾಷ್, ರೇಖಾ, ಸಿಬ್ಬಂದಿ ವರ್ಗದವರು, ಸಂಘದ ಸದಸ್ಯರು ಹಾಜರಿದ್ದರು.